ಚೆನ್ನೈ(ಡಿ.31): ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಕ್ಲಾಸಿಕ್ 350 ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಸ್ಟೈಲೀಶ್, ಪರ್ಫಾಮೆನ್ಸ್‌ ಹಾಗೂ ನಗರದ ಟ್ರಾಫಿಕ್‌ನಲ್ಲೂ ಆರಾಮವಾಗಿ ರೈಡ್ ಮಾಡಲು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಉತ್ತಮ ಬೈಕ್. ಇದೀಗ ಹೊಸ ಅವತಾರದಲ್ಲಿ ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್!.

ಆಲೋಯ್ ವೀಲ್ಹ್, BS6 ಎಂಜಿನ್ ಸೇರಿದಂತೆ ಪ್ರಮುಖ ಬದಲಾವಣೆಗಳು ಈ ಬೈಕ್‌ನಲ್ಲಿದೆ. ಈ ಹಿಂದೆ ಅಲೋಯ್ ವೀಲ್ಹ್‌ಗಾಗಿ ಗ್ರಾಹಕರು ಮಾಡಿಫಿಕೇಶನ್ ಸೆಂಟರ್‌ಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಬಳಿಕ ರಾಯಲ್ ಎನ್‌ಫೀಲ್ಡ್ ಹೆಚ್ಚುವರಿ ಕಿಟ್ ಮೂಲಕ ವಿತರಣೆ ಆರಂಭಿಸಿತು. ಇದೀಗ ಫಿಕ್ಸ್‌ ಅಲೋಯ್ ವೀಲ್ಹ್ ಬೈಕ್ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಇದನ್ನೂ ಓದಿ: ಜಾವಾ ಪೆರಾಕ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ಹೊಸ ಬಣ್ಣ ಹಾಗೂ ಆಕರ್ಷಕ ಗ್ರಾಫಿಕ್ ಡಿಸೈನ್ ಕೂಡ ಹೊಂದಿದೆ. ಈಗಾಗಲೇ ನೂತನ ರಾಯನ್ ಎನ್‌ಫೀಲ್ಡ್  ಬೈಕ್ ಟೆಸ್ಟ್ ನಡೆಯುತ್ತಿದೆ. ಜನವರಿ ಆರಂಭದಲ್ಲೇ ನೂತನ ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಿಡುಗಡೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ರಾಯನ್ ಎನ್‌ಫೀಲ್ಡ್  ಕ್ಲಾಸಿಕ್ 350 ಬೈಕ್ ಬೆಲ 1.45 ಲಕ್ಷ ರೂಪಾಯಿ. ಆದರೆ ನೂತನ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಾಗಲಿದೆ. ಕಾರಣ ಇದು  BS6 ಎಂಜಿನ್ ಹೊಂದಿದೆ.