ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ABS ಬೈಕ್ ಬಿಡುಗಡೆ!
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ABS ತಂತ್ರಜ್ಞಾನ ಹೊಂದಿದೆ. ಈ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ಮಾಹಿತಿ.
ಚೆನ್ನೈ(ಫೆ.27): ರಾಯಲ್ ಎನ್‌ಫೀಲ್ಡ್ 350 ಬೈಕ್ ಇದೀಗ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಈ ಮೂಲಕ ಅವಧಿಗೂ ಮುನ್ನ ಕೇಂದ್ರ ಸರ್ಕಾರದ ನಿಯಮ ಪಾಲಿಸಿದೆ. ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ABS ತಂತ್ರಜ್ಞಾನದೊಂದಿಗೆ ಈಗಾಲೇ ಬಿಡುಗಡೆಯಾಗಿದೆ. ಆದರೆ ಕ್ಲಾಸಿಕ್ 350 ಬೈಕ್ ಇದೀಗ ABS ತಂತ್ರಜ್ಞಾನ ಅಳವಡಿಸಿಕೊಂಡಿದೆ.
ಇದನ್ನೂ ಓದಿ: ಭಾರತದ ಮಿಲಿಟರಿ ಶಕ್ತಿಯಲ್ಲಿದೆ 4 ಅತ್ಯಾಧುನಿಕ ವಾಹನ!
ನೂತನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ABS ಬೈಕ್ ಬೆಲೆ 1.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ABS ಇಲ್ಲದ ಹಳೇ ಕ್ಲಾಸಿಕ್ 350 ಬೈಕ್‌ಗಿಂತ ನೂತನ ಬೈಕ್ ಬೆಲೆ 5800 ರೂ. ಹೆಚ್ಚಾಗಿದೆ. ಡ್ಯುಯೆಲ್ ಚಾನೆಲ್ ABS ಬ್ರೇಕ್ ಅಳವಡಿಸಲಾಗಿದೆ. ಈ ಹಿಂದೆ ಬಿಡುಗಡೆಯಾದ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್‌ಗಳಲ್ಲೇ ಇದೇ ತಂತ್ರಜ್ಞಾನ ಅಳವಡಿಸಲಾಗಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?
ABS ಹೊರತು ಪಡಿಸಿದರೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 346 cc,ಸಿಂಗಲ್ ಸಿಲಿಂಡರ್,ಏರ್ ಕೂಲ್‌ಡ್ ಎಂಜಿನ್ 19.8 bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಕ್ಲಾಸಿಕ್ ಬೆನ್ನಲ್ಲೇ ಇದೀಗ ಬುಲೆಟ್ ಕೂಡ ABS ತಂತ್ರಜ್ಞಾದೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.