ಚೆನ್ನೈ(ಜ.12): ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ಬೈಕ್‌ಗಿಂತ ನೂತನ BS6 ಎಂಜಿನ್ ಬೈಕ್ ಬೆಲೆ 15,000 ರೂಪಾಯಿ ಹೆಚ್ಚಳವಾಗಿದೆ. ನೂತನ ಬೈಕ್ ಬೆಲೆ 1.65 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಇದನ್ನೂ ಓದಿ: ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್

ಎಂಜಿನ್, ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ ಕ್ಲಾಸಿಕ್ 500 ಬೈಕ್‌ಗಳಲ್ಲಿದ್ದ ಕ್ರೋಮ್ ಬ್ಲಾಕ್ ಪೈಂಟ್ ಇದೀಗ ನೂತನ ಕ್ಲಾಸಿಕ್ 350 ಬೈಕ್‌ಗಳಲ್ಲೂ ಲಭ್ಯವಿದೆ. ಇನ್ನು ಎಂಜಿನ್ ಹೆಡ್ ಬ್ಲಾಕ್ ಪೈಂಟ್ ಮಾಡಿರುವುದು ಬೈಕ್ ಅಂದ ಹೆಚ್ಚಿಸಿದೆ. ಇಷ್ಟೇ ಅಲ್ಲ ಎರಡು ಹೆಚ್ಚುವರಿ ಬಣ್ಣಗಳಲ್ಲೂ ಕ್ಲಾಸಿಕ್ 350 ಬೈಕ್ ಲಭ್ಯವಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ರೆಬೆಲ್ ಬೈಕ್ ಅನಾವರಣ

ನೂತನ ಬೈಕ್‌ನಲ್ಲಿ ಅಲೋಯ್ ವೀಲ್ಹ್ ಆಯ್ಕೆ ಕೂಡ ಲಭ್ಯವಿದೆ.  ಟ್ಯೂಬ್‌ಲೆಸ್ ಟೈಯರ್ ಸೇರಿದಂತೆ ಕೆಲ ಫೀಚರ್ಸ್ ನೂತನವಾಗಿ ಸೇರಿಸಿಕೊಳ್ಳಲಾಗಿದೆ. BS6 ಎಂಜಿನ್ ಕ್ಲಾಸಿಕ್ 350 ಬೈಕ್ ಆನ್ ರೋಡ್ ಬೆಲೆ ಸರಿಸುಮಾರು 2 ಲಕ್ಷ ರೂಪಾಯಿ. BS6 ಎಂಜಿನ್ ಬೈಕ್ ಮೂಲಕ ರಾಯಲ್ ಎನ್‌ಫೀಲ್ಡ್ ಜಾವಾ ಬೈಕ್ ಸೇರಿದಂತೆ ಇತರ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.