ಗೋವಾ(ನ.27): ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ ಬಾಬ್ಬರ್ ಬೈಕ್‌ಗೆ ಕಾಯುವಿಕೆ ಹಚ್ಚಾಗಿದೆ. ಇದೀಗ ಗೋವಾದಲ್ಲಿನ ಮುಕ್ತಾಯಗೊಂಡ ರೈಡರ್ ಮೇನಿಯಾ ಮೋಟಾರು ಶೋನಲ್ಲಿ ರಾಯಲ್ ಎನ್‌ಫೀಲ್ಡ್ ರೇಗಲ್ ಬಾಬ್ಬರ್ ಬೈಕ್ ಎಲ್ಲರ ಗಮನಸೆಳೆದಿದೆ. ಕಸ್ಟಮೈಸ್ಡ್ ಬಾಬ್ಬರ್ 650 ಬೈಕ್, ಆಕರ್ಷಕ ಲುಕ್ ಹೊಂದಿದೆ.

ಇದನ್ನೂ ಓದಿ: ಹೆಚ್ಚು ಆಕರ್ಷಕ, ಹಲವು ವಿಶೇಷತೆ; ಜಾವಾ ಪೆರಾಕ್ ಬೈಕ್ ಬಿಡುಗಡೆ!

ಡಾರ್ಕ್ ಗ್ರೇ ಕಲರ್‌ನಿಂದ ಕೂಡಿರುವ ನೂತನ ಬೈಕ್ ಹೆಚ್ಚು ಅಗ್ರೆಸ್ಸೀವ್ ಲುಕ್ ಹೊಂದಿದೆ. ಬ್ರೌನ್ ಕಲರ್ ಸಿಂಗಲ್ ಸೀಟ್‌ನಿಂದ ಬಾಬ್ಬರ್ ಲುಕ್ ಮತ್ತಷ್ಟು ಹೆಚ್ಚಾಗಿದೆ. ಈ ಬೈಕ್‌ನಲ್ಲಿ ಹ್ಯಾಂಡ್ಲ ಬಾರ್ ಪ್ಲಾಟರ್ ಮಾಡೆಲ್ ಬಳಸಲಾಗಿದೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೊಬರ್ ಬೈಕ್ ಟೀಸರ್ ಬಿಡುಗಡೆ-ಹೇಗಿದೆ ಬೈಕ್

ಈಗಾಗಲೇ ಬಿಡುಗಡೆಯಾಗಿರುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಬೈಕ್ ಎಂಜಿನ್‌ನ್ನೇ ನೂತನ ಬಾಬ್ಬರ್ ಬೈಕ್‌ಗೂ ಬಳಸಲಾಗಿದೆ. 648cc ಏರ್/ ಆಯಿಲ್ ಕೂಲ್ಡ್, ಪ್ಯಾರೆಲೆಲ್ ಟ್ವಿನ್ ಮೋಟಾರ್ ಹೊಂದಿದ್ದು,  47bhp  ಪವರ್ ಹಾಗೂ 52Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಯ್ಸ್ ಸೌಲಭ್ಯವಿದೆ.