Asianet Suvarna News Asianet Suvarna News

ರೋಡ್ ಟೆಸ್ಟ್ ಯಶಸ್ವಿ- ಶೀಘ್ರದಲ್ಲಿ ರೆನಾಲ್ಟ್ ಟ್ರೈಬರ್ ಬಿಡುಗಡೆ!

 ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ನೂತನ ಕಾರು ಬಿಡುಗಡೆ ಮಾಡುತ್ತಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲಿದೆ. ಈಗಾಗಲೇ ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರ್ಣಗೊಲಿಸಿರುವ ನೂತನ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

Renault will launch MPV baser triber car soon
Author
Bengaluru, First Published May 17, 2019, 7:54 PM IST
  • Facebook
  • Twitter
  • Whatsapp

ನವದೆಹಲಿ(ಮೇ.17): ರೆನಾಲ್ಟ್ ಇದೀಗ ಹೊಸ ಟ್ರೈಬರ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಯ ಕಾರು ಇದಾಗಿದ್ದು,  ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿ ನೀಡಲಿದೆ. ಇದೇ ಈ ಕಾರಿನ ವಿಶೇಷತೆ. ನೂತನ ರೆನಾಲ್ಟ್ ಟ್ರೈಬರ್ ಕಾರು ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರ ಬೊಲೆರೊ!

ಈ ಕಾರಿನ ಬೆಲೆ ಕೇವಲ 5.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಭಾರತದಲ್ಲಿರುವ ಅತ್ಯಂತ ಕಡಿಮೆ ಬೆಲೆಯ MPV ಕಾರು.  ಜುಲೈನಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಅತ್ಯುತ್ತಮ ಗುಣಮಟ್ಟ, ಮೈಲೇಜ್ ಹಾಗೂ ಗರಿಷ್ಠ ಸುರಕ್ಷತೆ ನೀಡಲಿದೆ ಎಂದು ಕಂಪನಿ ಹೇಳಿದೆ. ಅಕ್ಟೋಬರ್ 1, 2019ರಲ್ಲಿ ಈ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸೇಫ್ಟಿಗೆ ಮೊದಲ ಆದ್ಯತೆ- 5 ಸ್ಟಾರ್ ಕಾರನ್ನೇ ನೀಡುತ್ತೇವೆ: ರತನ್ ಟಾಟಾ

ನೂತನ ಕಾರಿನ ಎಂಜಿನ್ ಪವರ್ ಕುರಿತು ಕಂಪನಿ ಯಾವುದೇ ಮಾಹಿತಿ ಬಹಿರಂಗ  ಪಡಿಸಿಲ್ಲ. ಆದರೆ  1.0 ಲೀಟರ್ ಟರ್ಬೋ ಚಾರ್ಜಡ್ ಪೆಟ್ರೋಲ್ ಎಂಜಿನ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇನ್ನು AMT (ಅಟೋಮ್ಯಾಟಿಕ್ ಟ್ರಾನ್ಸಮಿಶನ್) ಹೊಂದಿರಲಿದೆ. BS-VI ಎಮಿಶನ್ ನಿಯಮ ಕೂಡ ಪಾಲಿಸಲಿದೆ.

Follow Us:
Download App:
  • android
  • ios