ದೆಹಲಿ(ಸೆ.07): ರಿಸಾಲ ಎಲೆಕ್ಟ್ರಿಕ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಇದೀಗ ಭಾರತದಲ್ಲಿ ಎವೊಲೆಟ್ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಹಾಗೂ ATV ಮೋಟಾರ್ ಬಿಡುಗಡೆ ಮಾಡಿದೆ. ಸ್ಕೂಟರ್‌ನಲ್ಲಿ 3 ವೇರಿಯೆಂಟ್ ಲಭ್ಯವಿದ್ದರೆ, ಎವೊಲೆಟ್ ಹವ್ಕ್ ಬೈಕ್ ಹಾಗೂ ವಾರಿಯರ್ ATV ಎಲೆಕ್ಟ್ರಿಕ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ಬೆಲೆ 40,000 ರೂಪಾಯಿಂದ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!

ಎವೊಲೆಟ್ ಸ್ಕೂಟರ್ ಬೆಲೆ 39,499 ರೂಪಾಯಿಂದ್ ಆರಂಭಗೊಳ್ಳಲಿದ್ದು, ಗರಿಷ್ಠ ಬೆಲೆ 59,999. ಇನ್ನು ಎವೊಲೆಟ್ ಬೈಕ್ ಬೆಲೆ ಬಹಿರಂಗವಾಗಿಲ್ಲ. ATV ಬೆಲೆ 1,40,000 ರೂಪಾಯಿ. ಸ್ಕೂಟರ್ ಮೈಲೇಜ್ ರೇಂಜ್ 60 ರಿಂದ 65 ಕಿ.ಮೀ(ಸಂಪೂರ್ಣ ಚಾರ್ಜ್), ಇನ್ನು ಎಲೆಕ್ಟ್ರಿಕ್ ಬೈಕ್ ಮೈಲೇಜ್ 150 ಹಾಗೂ ATV 50 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಸ್ಕೂಟರ್ ಚಾರ್ಜ್ ಮಾಡಲು 3 ರಿಂದ 8 ಗಂಟೆ, ಬೈಕ್ 5 ಹಾಗೂ ATV 8 ಗಂಟೆ ಸಮಯ ತೆಗೆದುಕೊಳ್ಳಲಿದೆ.