Asianet Suvarna News Asianet Suvarna News

ರವಿಶಂಕರ್ ಪ್ರಸಾದ್ to ಗಂಭೀರ್; 18 ರಾಜಕಾರಣಿಗಳಿಂದ ಟ್ರಾಫಿಕ್ ರೂಲ್ಸ್ ಬ್ರೇಕ್!

ಹೊಸ ಟ್ರಾಫಿಕ್ ನಿಯಮ, ದುಬಾರಿ ದಂಡಕ್ಕೆ ಹಲವೆಡೆ ಇನ್ನೂ ವಿರೋಧವಿದೆ. ಪ್ರಮುಖವಾಗಿ ರೂಲ್ಸ್ ಜಾರಿಯಾದ ಮೇಲೆ ಸಾಮಾನ್ಯರ ಮೇಲೆ ಮಾತ್ರ ಪೊಲೀಸರು ಗದಾಪ್ರಹಾರ ನಡೆಸುತ್ತಿದ್ದಾರೆ ಅನ್ನೋ ಆರೋಪವಿದೆ. ಇದೀಗ ಟ್ರಾಫಿಕ್ ಪೊಲೀಸರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಮುಖ ರಾಜಕಾರಣಿಗಲು ಇದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದ ರಾಜಕಾರಣಿಗಳ ವಿವರ ಇಲ್ಲಿದೆ.

Ravi shankar prasad to gautam gambhir Politician who breaks traffic rules in delhi
Author
Bengaluru, First Published Nov 1, 2019, 6:18 PM IST

ನವದೆಹಲಿ(ನ.01): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ಪೊಲೀಸರು ನಗರದ ಮೂಲೆ ಮೂಲೆಗಳಲ್ಲಿ ಕ್ಯಾಮರ ಅಳವಡಿಸಿದ್ದಾರೆ. ಪ್ರತಿ ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅದೆಷ್ಟೇ ಗಣ್ಯ ವ್ಯಕ್ತಿಯಾಗಿದ್ದರೂ ಇ ಚಲನ್ ಮೂಲಕ ಫೈನ್ ಹಾಕುತ್ತಿದ್ದಾರೆ. ಇದೀಗ ದೆಹಲಿ ಪೊಲೀಸರು ವಾಹನ ಮಾಲೀಕರಿಗೆ ಹಲವು ಇ ಚಲನ್ ಕಳುಹಿಸಿದ್ದಾರೆ. ಇದರಲ್ಲಿ ಪ್ರಮುಖ ರಾಜಕಾರಣಿಗಳು ಇದ್ದಾರೆ.

ಇದನ್ನೂ ಓದಿ: ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!.

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಮುಖ ರಾಜಕಾರಣಿಗಳ ಪಟ್ಟಿಯಲ್ಲಿ 7 ಬಿಜೆಪಿ ಮುಖಂಡರೆ ಕಾಣಿಸಿಕೊಂಡಿದ್ದಾರೆ. ಗರಿಷ್ಠ ಬಾರಿ ನಿಯಮ ಉಲ್ಲಂಘಿಸಿದ ಪಟ್ಟಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ ಖುರ್ಷಿದ್ ಸ್ಥಾನ ಪಡೆದಿದ್ದಾರೆ. ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್, ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೇರಿದಂತೆ ಹಲವು ರಾಜಕಾರಣಿಗಳು ಅವರ ಪತ್ನಿಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ.

ಇದನ್ನೂ ಓದಿ: ಅಂದು ಟ್ರಕ್; ಇಂದು ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ಅಟ್ಟಹಾಸ!

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಮುಖರು: 

ಕಾರು ಮಾಲೀಕರ ಹೆಸರು ಪ್ರಕರಣ ಸಂಖ್ಯೆ ಪ್ರಕರಣದ ವಿವರ
ಶಶಿ ತರೂರ್(ಕಾಂಗ್ರೆಸ್) 2 ಸ್ಪೀಡ್ ಲಿಮಿಟಿ, ಸಿಗ್ನಲ್ ಜಂಪ್
ಅಜಯ್ ಮಾಕೇನ್(ಕಾಂಗ್ರೆಸ್) 2 ಸ್ಪೀಡ್ ಲಿಮಿಟ್, ಸ್ಟಾಪ್ ಲೈನ್ ಕ್ರಾಸ್
ಅಜಯ್ ಮಾಕೇನ್ ಪತ್ನಿ 1 ಸ್ಪೀಡ್ ಲಿಮಿಟ್
ಸಲ್ಮಾನ್ ಖುರ್ಷಿದ್(ಕಾಂಗ್ರೆಸ್) 16 ಸ್ಪೀಡ್ , ಸಿಗ್ನಲ್ ಹಾಗೂ ಇತರ
ನಿತಿನ್ ಗಡ್ಕರಿ ಪತ್ನಿ 1 ಸಿಗ್ನಲ್ ಜಂಪ್
ಹರ್ಷವರ್ಧನ್(ಬಿಜೆಪಿ) 1 ಸಿಗ್ನಲ್ ಜಂಪ್
ಮೀನಾಕ್ಷಿ ಲೇಖಿ(ಬಿಜೆಪಿ) 7 ಸ್ಪೀಡ್ ಲಿಮಿಟ್, ಪಾರ್ಕಿಂಗ್, ಇತರ
ಗೌತಮ್ ಗಂಭೀರ್ 3 ಪಾರ್ಕಿಂಗ್, ಸ್ಪೀಡ್ ಲಿಮಿಟ್
ರವಿ ಶಂಕರ್ ಪ್ರಸಾದ್ 2 ಪಾರ್ಕಿಂಗ್
ಮೀರಾ ಕುಮಾರ್(ಕಾಂಗ್ರೆಸ್) 6 ಸ್ಪೀಡ್ ಲಿಮಿಟಿ, ಸಿಗ್ನಲ್ ಜಂಪ್
ರಾಜೀವ್ ಪ್ರತಾಪ್ ರೆಡ್ಡಿ(ಬಿಜೆಪಿ) 1 ಸ್ಪೀಡ್ ಲಿಮಿಟ್
ಹನ್ಸ ರಾಜ್ ಹನ್ಸ್(ಬಿಜೆಪಿ) 2 ಸ್ಪೀಡ್ ಲಿಮಿಟಿ, ಸಿಗ್ನಲ್ ಜಂಪ್
ಹರೀಶ್ ರಾವತ್ ಪತ್ನಿ(ಕಾಂಗ್ರೆಸ್) 7 ಸ್ಪೀಡ್ ಲಿಮಿಟಿ, ಸಿಗ್ನಲ್ ಜಂಪ್
ಪರ್ವೇಶ್ ವರ್ಮಾ(ಬಿಜೆಪಿ) 8 ಸ್ಪೀಡ್ ಲಿಮಿಟಿ, ಸಿಗ್ನಲ್ ಜಂಪ್
ಶತ್ರುಘ್ನ ಸಿನ್ಹ(ಕಾಂಗ್ರೆಸ್ 6 ಸ್ಪೀಡ್ ಲಿಮಿಟಿ, ಸಿಗ್ನಲ್ ಜಂಪ್
ಹರ್ದೀಪ್ ಸಿಂಗ್ ಪುರಿ (ಬಿಜೆಪಿ) 5 ಪಾರ್ಕಿಂಗ್, ಸ್ಪೀಡ್ ಲಿಮಿಟ್
ನಿತ್ಯಾನಂದ್ ರೈ 1 ಸ್ಟಾಪ್ ಲೈನ್

ದೆಹಲಿ ಟ್ರಾಫಿಕ್ ಪೊಲೀಸರು ಫೈನ್ ಲಿಸ್ಟ್‌ನಲ್ಲಿ ಈ ರಾಜಕಾರಣಿಗಳು ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ ನೂತನ ಟ್ರಾಫಿಕ್ ನಿಯಮ ಜಾರಿ ಹಿಂದಿನ ರೂವಾರಿ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಪತ್ನಿ ಕೂಡ ನಿಯಮ ಉಲ್ಲಂಘಿಸಿದ್ದಾರೆ. 

ಇದನ್ನೂ ಓದಿ: 2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!

ಸಲ್ಮಾನ್ ಖುರ್ಷಿತ್ 16 ಬಾರಿ ನಿಯಮ ಉಲ್ಲಂಘಿಸಿದ್ದರೆ, ಬಿಜೆಪಿಯ ಪರ್ವೇಶ್ ವರ್ಮಾ 8, ಉತ್ತರಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಪತ್ನಿ 7 ಬಾರಿ ನಿಯಮ ಉಲ್ಲಂಘಿಸಿದ್ದಾರೆ. ಗೌತಮ್ ಗಂಭೀರ್ 3 ಬಾರಿ ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ್ದಾರೆ.

Follow Us:
Download App:
  • android
  • ios