ಇಟ್ಸ್ ಆಫಿಶಿಯಲ್: ಟ್ರೈನ್ 18 ಸ್ಪೀಡ್ 180 KM/Hr
ಟ್ರೈನ್18 ವೇಗ ಗಂಟೆಗೆ 180 ಕಿ.ಮೀ.| ವೇಗ ಖಚಿತಪಡಿಸಿದ ರೈಲ್ವೇ ಇಲಾಖೆ| ಟ್ರೈನ್18 ವೇಗದ ವಿಡಿಯೋ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ರೈಲ್ವೇ ಸಚಿವ| ಟ್ರೈನ್18 ವೇಗವನ್ನು ಧೃಢೀಕರಿಸಿದ ಪಿಯೂಷ್ ಗೋಯಲ್
ನವದೆಹಲಿ(ಡಿ.27): ಬುಲೆಟ್ ಟ್ರೈನ್ ನತ್ತ ದೃಷ್ಟಿ ನೆಟ್ಟಿರುವ ಭಾರತ, ಅದರ ಮೊದಲ ಹೆಜ್ಜೆಯಾಗಿ ಟ್ರೈನ್18 ಎಂಬ ಇಂಜಿನ್ ರಹಿತ ನೂತನ ರೈಲನ್ನು ಬಿಡುಗಡೆ ಮಾಡಿದೆ.
ಈಗಾಗಲೇ ಟ್ರೈನ್18 ನ ಪರೀಕ್ಷಾರ್ಥ ಚಾಲನೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಆಧುನಿಕ ರೈಲುಗಳು ಪ್ರಯಾಣಿಕರನ್ನು ಹೊತ್ತು ದೇಶ ಸಂಚರಿಸಲಿವೆ.
ಇನ್ನು ಟ್ರೈನ್ 18ನಲ್ಲಿ ಹಲವಾರು ವಿಶೇಷತೆಗಳಿದ್ದು, ಪ್ರಮುಖವಾಗಿ ಇದು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಲಿದೆ. ಈ ಮೂಲಕ ಟ್ರೈನ್18 ದೇಶದ ಅತ್ಯಂತ ವೇಗವಾಗಿ ಚಲಿಸುವ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Need for Speed: Train 18 seen cruising at a sustained 180Km/h, officially becoming the fastest train in India pic.twitter.com/2VNF1U3qrl
— Piyush Goyal (@PiyushGoyal) December 26, 2018
ಅದರಂತೆ ಟ್ರೈನ್18 ಪರೀಕ್ಷಾರ್ಥ ಚಾಲನೆ ವೇಳೆ ಇದರ ವೇಗವನ್ನು ಪರೀಕ್ಷೆ ಮಾಡಲಾಗಿದ್ದು, ಸ್ಪಿಡೋಮೀಟರ್ ನಲ್ಲಿ ಅಕ್ಷರಶಃ 180 ಕಿ.ಮೀ. ವೇಗ ತಲುಪಿ ದಾಖಲೆ ಬರೆದಿದೆ.
ರೈಲ್ವೇ ಸಚಿವ ಪಿಯೂಷ್ ಗೋಯಲ್ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಟ್ರೈನ್18 ವೇಗ ಗಂಟೆಗೆ 180 ಕಿ.ಮೀ. ಎಂದು ಧೃಢೀಕರಿಸಿದ್ದಾರೆ.