ಬೆಂಗಳೂರು(ಜ.26): ದಾರಿಯಲ್ಲಿ ಯುವಕರು ಬೈಕ್, ಸ್ಕೂಟರ್‌ನಲ್ಲಿ ಸ್ಟಂಟ್ ಮಾಡೋದನ್ನ ನೋಡಿದ್ದೇವೆ. ಅಪಾಯಕಾರಿ ಸ್ಟಂಟ್ ಮೂಲಕ ಗಮನಸಳೆಯುವ ಪ್ರಯತ್ನ ನಗರ ಪ್ರದೇಶಗಳಲ್ಲಿ ತುಸು ಹೆಚ್ಚು. ಆದರೆ ಇದೀಗ ತಾತನೊರ್ವ ಹಳೇ ಬೈಕ್‌ನಲ್ಲಿ ಅಪಾಯಕಾರಿ ಸ್ಟಂಟ್ ಮಾಡೋ ಮೂಲಕ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಗ್ರೀನ್ ಸೆಸ್: ಮತ್ತೆ ಹೆಚ್ಚಾಗಲಿದೆ ಪೆಟ್ರೋಲ್ ಬೈಕ್, ಸ್ಕೂಟರ್ ಬೆಲೆ !

ಸಾರ್ವಜನಿಕ ರಸ್ತೆಯಲ್ಲಿ ತನ್ನ ಸುಜುಕಿ ಮ್ಯಾಕ್ಸ್ 100 ಬೈಕ್‌ನ್ನ ವೇಗವಾಗಿ ರೈಡ್ ಮಾಡೋ ಮೂಲಕ ಸಾಹಸ ಪ್ರದರ್ಶಿಸಿದ್ದಾರೆ. ಬೈಕ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾರೆ. ಇಷ್ಟೇ ಅಲ್ಲ ಒಂದು ಬದಿಗೆ ಕುಳಿತು ಆರಾಮಾವಾಗಿ ರೈಡ್ ಮಾಡಿದ್ದಾರೆ. ಇನ್ನು ಬೈಕ್ ಮೇಲೆ ಮಲಗಿ ಕೂಡ ರೈಡ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬಳಿಕ ಮತ್ತೊಂದು ನಗರದ ಪೊಲೀಸರಿಗೆ ಮಾರುತಿ ಎರ್ಟಿಗ ಕಾರು!

ಈ ರೀತಿ ಸಾಹಸ ಮಾಡಲು ಹೆಚ್ಚಿನ ಬ್ಯಾಲೆನ್ಸ್ ಅಗತ್ಯ. ಆದರೆ ಈ ತಾತ ಮಾತ್ರ ಸಲೀಸಾಗಿ ಯಾವುದೇ ಅಳುಕಿಲ್ಲದೆ ಸ್ಟಂಟ್ ಮಾಡಿದ್ದಾರೆ.  ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿ ಸ್ಟಂಟ್ ಮಾಡುವುದು ಅಪರಾಧ.