ಕಟಕ್(ಆ.27): ಭಾರತದಲ್ಲೀಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಒಡಿಶಾ ಮೂಲದ EeVe ಎಲೆಕ್ಟ್ರಿಕ್ ಮೋಟಾರ್ ಕಂಪನಿ ಇದೀಗ 4 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. ಕೇವಲ 1,000 ರೂಪಾಯಿಗೆ ನೂತನ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. 

ಇದನ್ನೂ ಓದಿ: ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!

EeVe ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4 ವೇರಿಯೆಂಟ್ ಲಭ್ಯವಿದೆ. ಕ್ಸೇನಿಯಾ, ಯುಆರ್, ವಿಂಡ್, 4ಯು ವೇರಿಯೆಂಟ್ ಬಿಡುಗಡೆಯಾಗುತ್ತಿದೆ.  250 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ನೂನತ ಸ್ಕೂಟರ್‌ನಲ್ಲಿ 60V 20 AH ಲಿಥೀಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. ಸಂಪೂರ್ಣ ಚಾರ್ಜ್‌ಗೆ 4 ರಿಂದ 6 ಗಂಟೆ ಸಮಯ ತೆಗದುಕೊಳ್ಳಲಿದೆ.

ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಬೈಕ್ ಅನಾವರಣ; EV ಕಾರಿಗಿಂತ ದುಬಾರಿ!

ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 70 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಆ್ಯಂಟಿ ಥೆಫ್ಟ್, ಕಿ ಲೆಸ್ ಎಂಟ್ರಿ ಸೇರಿದಂತೆ ಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ. ಸದ್ಯ ಈ ಸ್ಕೂಟರ್ ಬೆಲೆ ಬಹಿರಂಗವಾಗಿಲ್ಲ. ಕಂಪನಿ ಪ್ರಕಾರ ಕಡಿಮೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಲಿದೆ. ನೂತನ EeVe ಎಲೆಕ್ಟ್ರಿಕ್ ಸ್ಕೂಟರ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.