ರೈಡಿಂಗ್‌ನಲ್ಲಿ ಮ್ಯೂಸಿಕ್ ಕೇಳಿದರೆ ಕಟ್ಟಲೇ ಬೇಕು ದಂಡ!

ಬೈಕ್ ಅಥವಾ ಸ್ಕೂಟರ್ ರೈಡ್ ವೇಳೆ ಮ್ಯೂಸಿಕ್ ಕೇಳಿದರೆ, ಸಂಗೀತ ಮುಗಿಯುವಷ್ಟರಲ್ಲಿ ನಿಮ್ಮನ್ನು ರಸ್ತೆ ನಿಯಮ ಉಲ್ಲಂಘಿಸಿದ ನೊಟೀಸ್ ಕಾಯುತ್ತಿರುತ್ತದೆ. ಇಷ್ಟೇ ಅಲ್ಲ ಕಟ್ಟ ಬೇಕಾದ ದಂಡ ಮೊತ್ತ ಈಗ 10 ಪಟ್ಟು ಹೆಚ್ಚಾಗಿದೆ. 

Listening music  while two wheeler rids also traffic offense

ಬೆಂಗಳೂರು(ಜು.05): ಬೈಕ್ ಅಥವೂ ಸ್ಕೂಟರ್ ರೈಡ್ ವೇಳೆ ಮ್ಯೂಸಿಕ್ ಕೇಳುತ್ತಾ ಸಾಗೋ ಹವ್ಯಾಸ ಹೆಚ್ಚಿನವರಿಗಿದೆ. ರೈಡ್ ಜೊತೆ ಮ್ಯೂಸಿಕ್ ಹಲವರು ಇಷ್ಟಪಡುತ್ತಾರೆ. ಆದರೆ ಮ್ಯೂಸಿಕ್ ಕೇಳುತ್ತಾ ಬೈಕ್ ಸವಾರಿ ಮಾಡಿದರೆ ನಿಯಮ ಉಲ್ಲಂಘಿಸಿದಂತೆ. ಜೊತೆಗೆ ದಂಡ ಕೂಡ  ಕಟ್ಟಬೇಕು. ಹೀಗಾಗಿ ಎಚ್ಚರ ವಹಿಸೋದು ಅಗತ್ಯ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; ಆಟೋ ಕಂಪನಿಗಳಿಗೆ ಬೇವು-ಬೆಲ್ಲ ಬಜೆಟ್ !

ಮ್ಯೂಸಿಕ್ ಕೇಳುತ್ತಾ ಬೈಕ್ ಅಥವಾ ಸ್ಕೂಟಕ್ ಸವಾರಿ ಮಾಡಿದರೆ ಬರೋಬ್ಬರಿ 1000 ರೂಪಾಯಿ ದಂಡ ಕಟ್ಟಬೇಕು. ಹೀಗಾಗಿ ಫೋನ್ ಬಳಕೆ ಮಾಡದೆ ಕೇವಲ ಮ್ಯೂಸಿಕ್ ಕೇಳಿದರೂ ದಂಡ ತಪ್ಪಿದ್ದಲ್ಲ. ಬೆಂಗಳೂರು ಹಾಗೂ ಪುಣೆ ನಗರದಲ್ಲಿ ಈ ನಿಯಮ ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದೆ. 

ಪೊಲೀಸರು ಈ ದಾರಿಯಲ್ಲಿ ಇರಲ್ಲ, ಮ್ಯೂಸಿಕ್ ಕೇಳಿದರೂ ದಂಡ ಕಟ್ಟಬೇಕಿಲ್ಲ ಅನ್ನೋ  ಆಲೋಚನೆಗಳನ್ನು ಬಿಟ್ಟು ಬಿಡಿ. ಕಾರಣ ಸಿಸಿಟಿವಿ ಫೂಟೇಜ್ ಮೂಲಕ ಪ್ರಮುಖ ಜಂಕ್ಷನ್, ಅಪಾಘತ ಸ್ಥಳಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಹೀಗಾಗಿ  ನೀವು ತಲುಪುವುದಕ್ಕಿಂತ ಮೊದಲೇ ನೊಟೀಸ್ ಜೊತೆ ದಂಡ ಚಲನ್ ನಿಮ್ಮನ್ನು ಕಾದಿರುತ್ತೆ. 

ಇದನ್ನೂ ಓದಿ: PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

ಮ್ಯೂಸಿಕ್ ಕೇಳುತ್ತಾ ದ್ವಿಚಕ್ರ ವಾಹನ ಸವಾರಿ ಮಾಡಿದರೆ, ಇತರ ವಾಹನಗಳ ಹಾರ್ನ್ ಶಬ್ದ, ಸವಾರರ ಗಮನ ಕೇಂದ್ರಿಕೃತವಾಗಿರುವುದಿಲ್ಲ. ಹೀಗಾಗಿ ಅಪಘಾತಗಳ ಸಂಭವ ಹೆಚ್ಚು.  ಹೀಗಾಗಿ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಲಾಗಿದ್ದು, ರಸ್ತೆ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ.
 

Latest Videos
Follow Us:
Download App:
  • android
  • ios