ನಿಸಾನ್ ಕಾರು ಮೋಟಾರ್ಸ್‌ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಕಂಪೆನಿ ಚೇರ್ಮೆನ್ ಅರೆಸ್ಟ್ ಆಗಿದ್ದಾರೆ. ಅಷ್ಟಕ್ಕೂ ನಿಸಾನ್ ಕಂಪೆನಿ ಚೇರ್ಮೆನ್ ಮಾಡಿದ ಎಡವಟ್ಟೇನು? ಇಲ್ಲಿದೆ ಹೆಚ್ಚಿನ ವಿವರ.
ಟೊಕಿಯೊ(ನ.20): ಹಣ ವರ್ಗಾವಣೆ ಹಾಗೂ ವಂಚನೆ ಆರೋಪದಡಿ ನಿಸಾನ್ ಮೋಟಾರ್ಸ್ ಚೇರ್ಮೆನ್ ಕಾರ್ಲೋಸ್ ಘೊಸನ್ ಅವರನ್ನ ಅರೆಸ್ಟ್ ಮಾಡಲಾಗಿದೆ. ಇದರಿಂದ ನಿಸಾನ್ ಕಾರು ಮಾರಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ.
ಕಾರ್ಲೋಸ್ ನಿಸಾನ್ ಕಂಪೆನಿ ಹಣವನ್ನ ವೈಯುಕ್ತಿಕ ಬಳಕೆ ಮಾಡಿದ ಆರೋಪ ಹೊತ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಚೇರ್ಮೆನ್ ಕಾರ್ಲೋಸ್ ಹಾಗೂ ನಿರ್ದೇಶಕ ಪ್ರತಿನಿಧಿ ಗ್ರೆಗ್ ಕೆಲ್ಲಿ ಇಬ್ಬರನ್ನೂ ಅರೆಸ್ಟ್ ಮಾಡಲಾಗಿದೆ. ಆರೋಪ ಕೇಳಿ ಬಂದ ತಕ್ಷಣವೇ ನಿಸಾನ್ ಗ್ರೂಪ್ ಆಂತರಿಕ ತನಿಖೆ ಮಾಡಿದೆ. ಈ ವೇಳೆ ಆರೋಪ ಸಾಬೀತಾಗಿದೆ.
Scroll to load tweet…
ನಿಸಾನ್ ಕಂಪೆನಿಯ ಕೋಟಿ ಕೋಟಿ ಹಣವನ್ನ ವೈಯುಕ್ತಿಕವಾಗಿ ಬಳಕೆ ಮಾಡಿದ್ದಾರೆ. ತಮ್ಮದೇ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಇವರಿಬ್ಬರನ್ನೂ ಬಂಧಿಸಲಾಗಿದೆ.
