ನವದೆಹಲಿ(ನ.13): ನಿಸಾನ್ ಇಂಡಿಯಾ ಭಾರತದಲ್ಲಿ ಹೊಚ್ಚ ಹೊಸ ಸಬ್ ಕಾಂಪಾಕ್ಟ್  SUV ಕಾರು ಬಿಡುಗಡೆ ಮಾಡುತ್ತಿದೆ. ನಿಸಾನ್ ಮ್ಯಾಗ್ನೈಟ್ ಅಧೀಕೃತ ಬೆಲೆ ಇನ್ನೊ ಹೊರಬಿದ್ದಿಲ್ಲ. ಆದರೆ ಈಗಾಗಲೇ ಮ್ಯಾಗ್ನೈಟ್ ಕಾರಿನ ಬೆಲೆ ಬಹಿರಂಗಗೊಂಡಿದೆ. ಬ್ರೌಶರ್ ಹಾಗೂ ನಿಸಾನ್ ವೆಬ್‌ಸೈಟ್‌ನಲ್ಲಿ ಬೆಲೆ ಮಾಹಿತಿ ಬಹಿರಂಗವಾಗಿದೆ. ಇದು ಭಾರತದ ಕಡಿಮೆ ಬೆಲೆಯ SUV ಕಾರಾಗಿದ್ದು, ಇದೀಗ ಬುಕಿಂಗ್ ಕೂಡ ಆರಂಭಗೊಂಡಿದೆ.

ನಿಸಾನ್ ಮ್ಯಾಗ್ನೈಟ್ ಭಾರತದ ಅತ್ಯಂತ ಕಡಿಮೆ ಬೆಲೆ SUV ಕಾರು!.

ನಿಸಾನ್ ಮ್ಯಾಗ್ನೈಟ್ ಕಾರಿನ ಬುಕಿಂಗ್ 11,000 ರೂಪಾಯಿಂದ  25,000 ರೂಪಾಯಿ ವರೆಗಿದೆ. ಕಾರಿನ ವೇರಿಯೆಟ್ ಅನುಸಾರ ಬುಕಿಂಗ್ ಬೆಲೆ ಬದಲಾಗಲಿದೆ. ನಿಸಾನ್ ಮ್ಯಗ್ನೈಟ್ ಕಾರಿನಲ್ಲಿ XE, XL, XV ಮತ್ತು XV Premium ಎಂಬ ನಾಲ್ಕು ವೇರಿಯೆಂಟ್ ಲಭ್ಯವಿದೆ.

ಹೊಚ್ಚ ಹೊಸ SUV ನಿಸಾನ್ ಮ್ಯಾಗ್ನೈಟ್ ಬಿಡುಗಡೆ: ಹೆಚ್ಚಾಯ್ತು ಪೈಪೋಟಿ!..

ಬೇಸ್ ಮಾಡೆಲ್ XE ಕಾರಿನ ಬೆಲೆ 5.5 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಎಂಡ್ ಕಾರಿನ ಬೆಲೆ 9.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಭಾರತದಲ್ಲಿ ಕಿಯಾ ಸೊನೆಟ್ ಅತ್ಯಂತ ಕಡಿಮೆ ಬೆಲೆ ಸಬ್ ಕಾಂಪಾಕ್ಟ್  SUV ಕಾರಾಗಿದೆ. ಆದರೆ ನಿಸಾನ್ ಮ್ಯಾಗ್ನೈಟ್ ಕಿಯಾ ಸೊನೆಟ್‌ಗಿಂತ 1.5 ಲಕ್ಷ ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಮಾರುತಿ ಸುಜುಕಿ ಬ್ರೆಜಾ, ಟಾಟಾ ನೆ್ಕ್ಸಾನ್, ಮಹೀಂದ್ರ ಎಕ್ಸ್‌ಯುವಿ 300, ಹ್ಯುಂಡೈ ವೆನ್ಯೂ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನಿಸಾನ್ ಕಾರು ಬಿಡುಗಡೆಯಾಗುತ್ತಿದೆ.