Asianet Suvarna News Asianet Suvarna News

ಹೆಲ್ಮೆಟ್ ಫೈನ್ ಓಕೆ, ಡ್ರಂಕ್ & ಡ್ರೈವ್ ಯಾಕೆ? ಪೊಲೀಸರಿಗೆ ಸವಾರನ ಪ್ರಶ್ನೆ!

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ್ದು ನನ್ನ ತಪ್ಪು, ಆದರೆ ಡ್ರಂಕ್ & ಡ್ರೈವ್ ನಿಯಮ ಉಲ್ಲಂಘನೆ ಶುದ್ದ ಸುಳ್ಳು ಎಂದು ಪೊಲೀಸರ ವಿರುದ್ಧವೇ ವಾಹನ ಸವಾರ ಹೋರಾಟಕ್ಕೆ ಮುಂದಾಗಿರುವ ಘಟನೆ ನಡೆದಿದೆ. ಪೊಲೀಸ್ ಹಾಗೂ ಸವಾರನ ಆರೋಪಗಳೇನು? ಇಲ್ಲಿದೆ ವಿವರ.

New Traffic rules Two wheeler fined 22500 rs for drunk and drive in odisha
Author
Bengaluru, First Published Sep 15, 2019, 9:40 PM IST

ಒಡಿಶಾ(ಸೆ.15): ಹೊಸ ಟ್ರಾಫಿಕ್ ರೂಲ್ಸ್ ಕುರಿತು ಪರ ವಿರೋದ ಚರ್ಚೆಗಳಿವೆ. ಇದರ ಬೆನ್ನಲ್ಲೇ ಪೊಲೀಸರ ವಿರುದ್ದ ಆರೋಪಗಳೂ ಇವೆ. ಪೊಲೀಸರ ಎದುರು ವಾಗ್ವಾದ ಮಾಡಿದರೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ದಂಡದ ಮೊತ್ತ ಏರಿಸುತ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.  ಒಡಿಶಾದಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಬರೋಬ್ಬರಿ 22,500 ರೂಪಾಯಿ ದಂಡ ಹಾಕಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿದ್ರೆ ದಂಡ ಇಲ್ಲ, ಪೊಲೀಸರೇ ನೀಡುತ್ತಾರೆ ಲೈಸೆನ್ಸ್, ಹೆಲ್ಮೆಟ್!

ಬಳಂಜಿರ್ ಜಿಲ್ಲೆಯ ಟ್ರಾಫಿಕ್ ಪೊಲೀಸರು, ಬೆಲ್ಪಾಡ ನಿವಾಸಿಯಾಗಿರುವ ಸುಶಾಂಕ್ ಕುಮಾರ್ ಮೆಹರ್‌ಗೆ 22,500 ರೂಪಾಯಿ ದಂಡ ಹಾಕಿದ್ದಾರೆ. ಪೊಲೀಸರ ಪ್ರಕಾರ ಸವಾರ, ಕುಡಿದು ವಾಹನ ಚಲಾಯಿಸಿದ ಕಾರಣಕ್ಕೆ 10,000 ರೂಪಾಯಿ, ಹೆಲ್ಮೆಟ್ ರಹಿತ ಚಾಲನೆಗೆ 500 ರೂಪಾಯಿ, ಡ್ರೈವಿಂಗ್ ಲೈಸೆನ್ಸ್ ಹಾಗೂ ದಾಖಲೆ ಪತ್ರ ನೀಡಲು ನಿರಾಕರಿಸಿದ ಕಾರಣಕ್ಕೆ 5,000 ರೂಪಾಯಿ, ರ್ಯಾಶ್ ಡ್ರೈವಿಂಗ್ ಕಾರಣಕ್ಕೆ 2,000 ರೂಪಾಯಿ, ಪೊಲೀಸರ ವಿರುದ್ಧ ವಾಗ್ವಾದ ಮಾಡಿದ ಕಾರಣಕ್ಕೆ 5000 ರೂಪಾಯಿ. ಒಟ್ಟು 22,500 ರೂಪಾಯಿ ದಂಡ ಹಾಕಲಾಗಿದೆ.

ಇದನ್ನೂ ಓದಿ: ಲುಂಗಿ ಧರಿಸಿದರೆ ಲಾರಿ ಚಾಲಕರಿಗೆ 2000 ರು. ದಂಡ!

ದುಬಾರಿ ದಂಡದ ಚಲನ್ ಪಡೆದಿರುವ ಸುಶಾಂತ್ ಕುಮಾರ್ ಹೇಳುವುದೇ ಬೇರೆ. ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಓಡಿಸಿದ್ದೇನೆ.  ಇದು ನನ್ನ ತಪ್ಪು. ಈ ನಿಯಮ ಉಲ್ಲಂಘನೆಗೆ ದಂಡ ಹಾಕಲಿ. ಆದರೆ ಕುಡಿದು ವಾಹನ ಚಲಾಯಿಸಿದ್ದೇನೆ, ರ್ಯಾಶ್ ಡ್ರೈವಿಂಗ್ ಸತ್ಯಕ್ಕೆ ದೂರವಾಗಿದೆ. ನಾನು ಪೊಲೀಸರ ಜೊತೆ ವಾಗ್ವಾದ ಮಾಡಿದ್ದಕ್ಕೆ ನನಗೆ ಈ ರೀತಿ ಅನ್ಯಾಯ ಮಾಡಲಾಗಿದೆ ಎಂದು ಸವಾರ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ಯಾರು ಸತ್ಯ ಅನ್ನೋದು ತನಿಖೆಯಿಂದಲೇ ಬಹಿರಂಗವಾಗಬೇಕಿದೆ.

Follow Us:
Download App:
  • android
  • ios