ಅತ್ಯಾಧುನಿಕ ತಂತ್ರಜ್ಞಾನದ ಆಡಿ A6 ಕಾರು ಬಿಡುಗಡೆ!

ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಆಡಿ ಭಾರತದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ವಿನ್ಯಾಸ, ಲುಕ್, ಪರ್ಫಾಮೆನ್ಸ್, ತಂತ್ರಜ್ಞಾನಗಳಲ್ಲಿ ಆಡಿ ಇತರ ಕಾರಿಗಿಂತ ಭಿನ್ನವಾಗಿದೆ. ಇದೀಗ ನ್ಯೂ ಜನರೇಶನ್ ಆಡಿ A6 ಕಾರು ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.

New generation audi a6 petrol car launched in India

ನವದೆಹಲಿ(ಅ.24): ನ್ಯೂ ಜನರೇಶನ್ ಆಡಿ A6 ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 54.20 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭವಾಗುತ್ತಿದೆ. ಕಾರಿನ ಹೊರಭಾಗ ಹಾಗೂ ಒಳಭಾಗ ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಭಾರತದಲ್ಲಿ  ಆಡಿ A6 ಪೆಟ್ರೋಲ್ ಎಂಜಿನ್ ಕಾರು ಮಾತ್ರ ಬಿಡುಗಡೆಯಾಗಿದೆ. ಡೀಸೆಲ್ ಇಂಜಿನ್ ಆಡಿ A6 ಕಾರು ಬೇಡಿಕೆಗೆ ಅನುಗುಣವಾಗಿ ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ. 

New generation audi a6 petrol car launched in India

ಇದನ್ನೂ ಓದಿ: ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!

ಆಡಿ A6 ಕಾರು, ಮರ್ಸಡೀಸ್ ಬೆಂಜ್ ಇ ಕ್ಲಾಸ್, BMW 5 ಸೀರಿಸ್, ವೋಲ್ವೋ S90 ಹಾಗೂ ಜಾಗ್ವಾರ್ XF ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿದೆ. ಮುಂಭಾಗದಲ್ಲಿ ದೊಡ್ಡದಾದ ಸಿಂಗಲ್ ಫ್ರೇಮ್ ಗ್ರಿಲ್, ಕ್ರೋಮ್ ಸ್ಲೇಟ್ಸ್, LeD ಹೆಡ್‌ಲ್ಯಾಂಪ್ಸ್ ಆಕರ್ಷಕ ಲುಕ್ ನೀಡುತ್ತಿದೆ.

ಇದನ್ನೂ ಓದಿ: ದೀಪಾವಳಿಗೆ ಖರೀದಿಸಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರು!.

ಒಳಭಾಗದಲ್ಲಿ ಹೊಸ ವಿನ್ಯಾಸ ಹಾಗೂ ಹೆಚ್ಚುವರಿ ಫೀಚರ್ಸ್ ಅಳವಡಿಸಲಾಗಿದೆ. ಟ್ವಿನ್ ಟಚ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,  ವರ್ಚುಯಲ್ ಕಾಕ್‌ಪಿಟ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, 4 ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಕ್ಯಾಬಿನ್‌ಗೆ ಲೆದರ್ ಹಾಗೂ ಪಿಯಾನೋ ಬ್ಲಾಕ್ ಶೇಡ್ ಕವರ್ ನೀಡಲಾಗಿದ್ದು,  ಒಳಭಾಗದಲ್ಲೂ ಅಷ್ಟೇ ಆಕರ್ಷವಾಗಿದೆ.

New generation audi a6 petrol car launched in India

ಇದನ್ನೂ ಓದಿ: ಬಿಡುಗಡೆಯಾಯ್ತು ಲ್ಯಾಂಬೋರ್ಗಿನಿ ಕಾರು: ಬೆಲೆ 4 ಕೋಟಿಗೂ ಮೇಲು!

8 ಏರ್‌ಬ್ಯಾಗ್ಸ್,  ABS ಹಾಗೂ EBD,ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಕ್ಯಾಮರ, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಜೊತೆಗೆ ಅಟೋ ಹೋಲ್ಡ್ ಫಂಕ್ಷನ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ನೂತನ ಆಡಿ A6 ಕಾರು 2.0-ಲೀಟರ್ TFSI ಪೆಟ್ರೋಲ್ ಮೋಟಾರ್ ಹೊಂದಿದ್ದು, 240 bhp ಪವರ್ ಹಾಗೂ 370 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  BS6 ಎಮಿಶನ್ ಎಂಜಿನ್ ಹೊಂದಿದ್ದು,   7 ಸ್ವೀಡ್ ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.   ಕಾರಿನ ಗರಿಷ್ಠ ವೇಗ 250 ಕಿ.ಮಿ ಪ್ರತಿ ಗಂಟೆಗೆ.  ಒಂದು ಲೀಟರ್ ಪೆಟ್ರೋಲ್‌ಗೆ ಈ ಕಾರು 14.11 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳುತ್ತಿದೆ.

 ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಆಡಿ ಕಾರಿನ ರಾಯಭಾರಿಯಾಗಿದ್ದಾರೆ. 

Latest Videos
Follow Us:
Download App:
  • android
  • ios