ನೂತನ ವ್ಯಾಗನ್R ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!

ಮಾರುತಿ ವ್ಯಾಗನ್ಆರ್ ಕಾರಿನ ಕ್ರಾಶ್ ಟೆಸ್ಟ್ ಫಲಿತಾಂಶ ಬಹಿರಂಗವಾಗಿದೆ. ಮಾರಾಟದಲ್ಲಿ ದಾಖಲೆ ಬರೆದ ವ್ಯಾಗನ್ಆರ್ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ ವಿವರ.

NCAP announces Maruti wagonr crash test result

ನವದೆಹಲಿ(ಅ.31): ಭಾರತದಲ್ಲಿ ಬಿಡುಗಡೆಯಾಗುವ ಕಾರುಗಳು ಕಡ್ಡಾಯವಾಗಿ ಕನಿಷ್ಠ ಸುರಕ್ಷತೆ ನೀಡಬೇಕು. ಕ್ರಾಶ್ ಟೆಸ್ಟ್‌ನಲ್ಲಿ ಪಾಸ್ ಆಗಿರಬೇಕು. ಇನ್ನು ಬೇಸ್ ಮಾಡೆಲ್ ಕಾರುಗಳಿಂದ ಟಾಪ್ ಮಾಡೆಲ್ ವರೆಗೂ ಮೂಲಭೂತ ಸುರಕ್ಷತಾ ಸೌಲಭ್ಯಗಳನ್ನು ನೀಡಬೇಕು ಅನ್ನೋದು ನಿಯಮ. ಇತ್ತೀಚೆಗೆ ಬಹುತೇಕಾ ಎಲ್ಲಾ ಆಟೋಮೊಬೈಲ್ ಕಂಪನಿಗಳು ನಿಯಮ ಪಾಸುತ್ತಿದೆ. ಇದೀಗ ನೂತನ ವ್ಯಾಗನ್ಆರ್ ಕಾರಿನ ಕ್ರಾಶ್ ಟೆಸ್ಟ್ ಫಲಿತಾಂಶ ಬಹಿರಂಗವಾಗಿದೆ.

ಇದನ್ನೂ ಓದಿ: ಮಾರಾಟ ಕುಸಿತದಲ್ಲೂ ಮಾರುತಿ ಕೈ ಹಿಡಿದ ವ್ಯಾನಗ್ಆರ್ ಕಾರು!

ನೂತನ ಮಾರುತಿ ವ್ಯಾಗನ್ಆರ್ ಕಾರು ಹೊಸ ವಿನ್ಯಾಸ, ಗಾತ್ರದಲ್ಲೂ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಕಾರು ಮಾರಾಟದಲ್ಲೂ ದಾಖಲೆ ಬರೆದಿದೆ. ನೂತನ ವ್ಯಾಗನ್ಆರ್ ಕಾರಿನ ಬೆಲೆ 4.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಆರಂಭಗೊಳ್ಳಲಿದೆ. NCAP ನಡೆಸಿದ ಕ್ರಾಶ್ ಟೆಸ್ಟ್‌ನಲ್ಲಿ ಈ ಕಾರು ಕೇವಲ 2 ಸ್ಟಾರ್ ಪಡೆದುಕೊಂಡಿದೆ.

ಇದನ್ನೂ ಓದಿ: 40 ಸಾವಿರ ವ್ಯಾಗನ್R ಕಾರು ಹಿಂಪಡೆದ ಮಾರುತಿ!

ನೂತನ ವ್ಯಾಗನ್ಆರ್ ಕಾರಿನಲ್ಲಿ ಪ್ರಯಾಣಿಸುವ ವಯಸ್ಕರ ಸುರಕ್ಷತೆಯಲ್ಲಿ 2 ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಯಲ್ಲಿ  2 ಸ್ಟಾರ್ ಪಡೆದುಕೊಂಡಿದೆ.  ವಯಸ್ಕರ ಸುರಕ್ಷೆ ವಿಭಾಗ ಒಟ್ಟು ಗರಿಷ್ಟ 17 ಅಂಕಗಳ ಪೈಕಿ ವ್ಯಾಗನ್ಆರ್ 6.93 ಅಂಕ ಪಡೆದಿದೆ. ಇನ್ನು ಮಕ್ಕಳ ಸುರಕ್ಷತೆಯ 49 ಅಂಕಗಳ ಪರೀಕ್ಷೆಯಲ್ಲಿ 16.33 ಅಂಕ ಸಂಪಾದಿಸಿದೆ. ಒಟ್ಟು 2 ಸ್ಟಾರ್‌ಗೆ ತೃಪ್ತಿ ಪಟ್ಟುಕೊಂಡಿದೆ.

ಇದನ್ನೂ ಓದಿ: ಇನೋವಾಗೆ ಪೈಪೋಟಿ- ಬಿಡುಗಡೆಯಾಗುತ್ತಿದೆ 7 ಸೀಟರ್ ಮಾರುತಿ ವ್ಯಾಗನ್ಆರ್!

ಭಾರತದಲ್ಲಿ ಐಷಾರಾಮಿ ಕಾರುಗಳನ್ನು ಹೊರತು ಪಡಿಸಿದರೆ, ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಕಾರು ಪಾತ್ರವಾಗಿದೆ. ಈ ಕಾರು ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. 
 

Latest Videos
Follow Us:
Download App:
  • android
  • ios