ಭಾರತದಲ್ಲಿ ಬ್ರಿಟೀಷ್ ಕಾರು ಅನಾವರಣ-ಟಾಟಾ ಹ್ಯಾರಿಯರ್, ಜೀಪ್‌ಗೆ ನಡುಕ!
ಬ್ರಿಟೀಷ್ ಮೂಲದ MG ಮೋಟಾರ್ಸ್ ಭಾರತದಲ್ಲಿ ತನ್ನ ಮೊದಲ ಕಾರು ಅನಾವರಣ ಮಾಡಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೆಕ್ಟರ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ನವದೆಹಲಿ(ಮೇ.15): ಬ್ರಿಟೀಷ್ ಮೂಲದ MG ಮೋಟಾರ್ಸ್ ಭಾರತಕ್ಕೆ ಕಾಲಿಟ್ಟಿದೆ. ಇದೀಗ ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಪ್ರತಿಸ್ಪರ್ಧಿಯಾಗಿ MG ಹೆಕ್ಟರ್ SUV ಕಾರು ಅನಾವರಣಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ MG ಹೆಕ್ಟರ್ ಕಾರು ಭಾರತದಲ್ಲಿ ಸಂಚಲನ ಸೃಷ್ಟಿಸಲಿದೆ ಅನ್ನೋ ವಿಶ್ವಾಸ ಕಂಪನಿ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಮಾರಾಟ ಕುಸಿತದಲ್ಲೂ ಮಾರುತಿ ಕೈ ಹಿಡಿದ ವ್ಯಾನಗ್ಆರ್ ಕಾರು!
MG ಹೆಕ್ಟರ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ FCA ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. ನೂತನ ಕಾರಿನ ಬೆಲೆ 15 ರಿಂದ ಆರಂಭಗೊಳ್ಳಲಿದ್ದು, ಗರಿಷ್ಟ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಜೂನ್ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಭಾರತಕ್ಕೆ ಚೀನಾದ ಚೆರಿ ಕಾರು- ವಾಹನ ಮಾರುಕಟ್ಟೆ ತಲ್ಲಣ!
ವಾಯ್ಸ್ ಡಿಟೆಕ್ಟ್ ತಂತ್ರಜ್ಞಾನ ಹೊಂದಿರುವ MG ಹೆಕ್ಟರ್, ಕಾರಿನ ಡೋರ್, ವಿಂಡೋ, ಎಸಿ ಸೇರಿದಂತೆ ಯಾವುದೇ ಸ್ವಿಚ್ ಆನ್ ಮಾಡಲು ಹೇಳಿದರೆ ಸಾಕು, ನಾವು ಕೈಯಿಂದ ಮಾಡಬೇಕಂತಿಲ್ಲ. ಆಧುನಿಕ ತಂತ್ರಜ್ಞಾನ ನಿಮ್ಮ ಮಾತನ್ನು ಕೇಳಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಹಲೋ MG ಎಂದು ಹೇಳಿ ಬಳಿಕ ಎಸಿ ಆನ್ ಅಥವಾ ಆಫ್ ಅಂದರೆ ಕಾರ್ಯನಿರ್ವಹಿಸುತ್ತದೆ.