ನವದೆಹಲಿ(ಸೆ.07): ಭಾರತದ ಆಟೋಮೊಬೈಲ್ ಕಂಪನಿಗಳು ಇದೀಗ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಪೈಪೋಟಿ ಆರಂಭಿಸಿವೆ. ಮಾರಾಟ ಚೇತರಿಕೆ ಬೆನ್ನಲ್ಲೇ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ  MG ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಿದೆ.

ಇನೋವಾ ಪ್ರತಿಸ್ಪರ್ಧಿ MG ಹೆಕ್ಟರ್ ಪ್ಲಸ್ ಕಾರು ಬಿಡುಗಡೆ

ಲಿಮಿಟೆಡ್ ಎಡಿಶನ್ ಹೆಕ್ಟರ್ ಕಾರು ಪೆಟ್ರೋಲ್ ಹಾಗೂ ಡಿಸೇಲ್ ವೇರಿಯೆಂಟ್ ಲಭ್ಯವಿದೆ. ಟಾಟಾ ಹ್ಯಾರಿಯರ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಎಂಜಿ ಹೆಕ್ಟರ್ ಇದೀಗ ಸ್ಪೆಷಲ್ ಎಡಿಶನ್ ಮೂಲಕ ಮತ್ತಷ್ಟು ಪೈಪೋಟಿ ನೀಡಲು ಮುಂದಾಗಿದೆ. ಹೆಕ್ಟರ್ ಸ್ಪೆಷಲ್ ಎಡಿಶನ್ ಪೆಟ್ರೋಲ್ ಕಾರಿನ ಬೆಲೆ  13.63 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು ಡೀಸೆಲ್ ವೇರಿಯೆಂಟ್ ಕಾರಿನ ಬೆಲೆ 14.99 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.

50 ಸಾವಿರ ರೂಪಾಯಿಗೆ ಬುಕ್ ಮಾಡಿ MG ಹೆಕ್ಟರ್ ಪ್ಲಸ್ ಕಾರು!.

ಈಗಾಗಲೇ ಮಾರುಕಟ್ಟೆಯಲ್ಲಿರುವ ಹೆಕ್ಟರ್ ಕಾರಿಗೂ ಸ್ಪೆಷಲ್ ಎಡಿಶನ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಮೂಲಕ ಇತರ SUV ಕಾರುಗಳಿಗೆ ಪೈಪೋಟಿ ನೀಡಲಿದೆ. ಸ್ಪೆಷಲ್ ಎಡಿಶನ್ ಕಾರಿನಲ್ಲಿ ವೈಯರ್ ಲೆಸ್ ಮೊಬೈಲ್ ಚಾರ್ಜರ್, ಏರ್ ಪ್ಯೂರಿಫೈಯರ್, 26.5cm ಡಿಸ್‌ಪ್ಲೇ ಸೇರಿದಂತೆ ಕೆಲ ಫೀಚರ್ಸ್ ಹೆಚ್ಚುವರಿಯಾಗಿ ನೀಡಲಾಗಿದೆ.

ಎಂಜಿನ್‌ನಲ್ಲಿ ಎರಡು ವೇರಿಯೆಂಟ್ ನೀಡಲಾಗಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ವರ್ಶನ್ ಕಾರು 168 bhp ಪವರ್ ಹಾಗೂ  350 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ಕಾರು  141 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  ಎರಡೂ ಎಂಜಿನ್ ವೇರಿಯೆಂಟ್ ಕಾರುಗಳು 6 ಸ್ಪೀಡ್ ಮಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.