ಮೇ.15 ರಿಂದ ದಾಟ್ಸನ್ ರೆಡಿ ಗೋ ಕಾರಿನ ಬುಕಿಂಗ್ ಆರಂಭ; ಕಡಿಮೆ ಬೆಲೆ, ಹಲವು ವಿಶೇಷತೆ!
ದಾಟ್ಸನ್ ಇಂಡಿಯಾ ಇತ್ತೀಚೆಗೆ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆ ಮಾಡಿತ್ತು. ಕೆಲ ಬದಲಾವಣೆ, ಕೆಲವು ವಿಶೇಷತೆಗಳೊಂದಿಗೆ ನೂನತ ಕಾರು ಬಿಡುಗಡೆಗೆ ಸಜ್ಜಾಗಿದೆ. ಮೇ.15ರಿಂದ ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. ನೂತನ ಕಾರಿನ ಬೆಲೆ ಕೇವಲ 3 ಲಕ್ಷ ರೂಪಾಯಿ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಏ.30): L ಶೇಪ್ LED DRLs ಹಾಗೂ 5-ಸ್ಪೋಕ್ ವೀಲ್ಹ್ ಕ್ಯಾಪ್ಸ್, 9.0 ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ 50ಕ್ಕೂ ಹೆಚ್ಚಿನ ಫೀಚರ್ಸ್‌ಗಳೊಂದಿಗೆ ನೂತನ ದಾಟ್ಸನ್ ರೆಡಿ ಗೋ BS6 ಕಾರು ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರಿನ ಬೆಲೆ 3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಈ ಕಾರಿನ ಬುಕಿಂಗ್ ಮೇ.15ರಿಂದ ಆರಂಭಗೊಳ್ಳಲಿದೆ.
ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು!
CMF-A ಪ್ಲಾಟ್‌ಫಾರ್ಮ್ ಅಡಿಯಲ್ಲಿ ನೂತನ ದಾಟ್ಸನ್ ರೆಡಿ ಗೋ BS6 ಕಾರು ನಿರ್ಮಾಣವಾಗಿದೆ. ಇದೇ ಫ್ಲಾಟ್‌ಫಾರ್ಮ್ ಅಡಿಯಲ್ಲಿ ರೆನಾಲ್ಟ್ ಕ್ವಿಡ್ ಕಾರು ಕೂಡ ಮಾರುಕಟ್ಟೆ ಪ್ರವೇಶಿಸಿದೆ. ಮುಂಭಾಗದ ಬಂಪರ್‌ನಲ್ಲಿ ಕ್ರೋಮ್ ಡಿಸೈನ್ ಫಿನೀಶಿಂಗ್, LED ಟೈಲ್ ಲ್ಯಾಂಪ್ಸ್, ಸ್ಪಾಯ್ಲರ್ , LED ಫಾಗ್ ಲ್ಯಾಂಪ್ಸ್, ಟ್ವೀಕಡ್ ಬಂಪರ್, ರೂಫ್ ರೈಲ್ಸ್ ಹಾಗೂ 14 ಇಂಚಿನ ವೀಲ್ಹ್ ಕ್ಯಾಪ್ಸ್ ಸೇರಿದಂತೆ ಮಹತ್ವದ ಬದಲಾವಣೆಗಳು ಈ ಕಾರಿನಲ್ಲಿ ಕಾಣಬಹುದು.
5ಸಾವಿರ ರೂ.ಗೆ ಬುಕ್ ಮಾಡಿ ಮಹೀಂದ್ರ ಸ್ಕಾರ್ಪಿಯೋ BS6, ಆನ್‌ಲೈನ್‌ನಲ್ಲಿ ಮಾತ್ರ!...
ಕಾರಿನ ಒಳಭಾಗ ಕೂಡ ಆಕರ್ಷವಾಗಿದೆ. ಡ್ಯುಯೆಲ್ ಟೋನ್ ಲೇಔಟ್. ಆ್ಯಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡು ಆಟೋ ಪ್ಲೇ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಂದಿಸಿಕೊಳ್ಳಬಲ್ಲ ಸೀಟ್ ಕೂಡ ಈ ಕಾರಿನಲ್ಲಿದೆ. ಸುರಕ್ಷತೆಗೆ ಆದ್ಯತೆ ನೀಡಿರುವ ದಾಟ್ಸನ್ ಏರ್‌ಬ್ಯಾಗ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರಾಂ, ಕ್ರಾಶ್ ಇಂಪಾಕ್ಟ್ ಪ್ರೊಟೆಕ್ಷನ್ ಸೇರಿದಂತೆ ಕೆಲ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.
ಎರಡು ಎಂಜಿನ್ ಆಯ್ಕೆಗಳಿವೆ. 0.8 ಲೀಟರ್ ಹಾಗೂ 1.0 ಲೀಟರ್ ಎಂಜಿನ್ ಆಯ್ಕೆ ಲಭ್ಯವಿದೆ. 53bhp/72Nm ಹಾಗೂ 67bhp/91Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ AMT ಆಯ್ಕೆ ಲಭ್ಯವಿದೆ. ಲಾಕ್‌ಡೌನ್ ತೆರವಾದ ಬೆನ್ನಲ್ಲೇ ನೂತನ ದಾಟ್ಸನ್ ರೆಡಿ ಗೋ ಕಾರು ಬಿಡುಗಡೆಯಾಗಲಿದೆ.