ನವದೆಹಲಿ[ಸೆ.28]: ದೇಶದ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ತನ್ನ ಬಹುಬೇಡಿಕೆಯ ಹ್ಯಾಚ್‌ಬ್ಯಾಕ್‌ ಕಾರು ಬಲೆನೋ ಕಾರಿನ ಬೆಲೆಯನ್ನು ಬರೋಬ್ಬರಿ ಒಂದು ಲಕ್ಷದಷ್ಟು ಇಳಿಕೆ ಮಾಡಿರುವುದಾಗಿ ಹೇಳಿಕೊಂಡಿದೆ.

ಕಾರ್ಪೊರೆಟ್‌ ತೆರಿಗೆ ಕಡಿತ, ಮಾರುತಿ ಕಾರು ಬೆಲೆಯಲ್ಲಿ ಇಳಿಕೆ!

ಕೆಲ ವಾರಗಳ ಹಿಂದಷ್ಟೇ ಆಲ್ಟೋ, ಸ್ವಿಫ್ಟ್‌, ವಿತಾರಾ ಬ್ರೀಝಾ, ಎಸ್‌-ಕ್ರಾಸ್‌ ಸೇರಿದಂತೆ ತನ್ನ ಉತ್ಪಾದನೆಯ ಆಯ್ದ ಕೆಲವು ಮಾಡೆಲ್‌ಗಳ ಶೋ ರೂಂ ಬೆಲೆಯನ್ನು 5000 ರು.ವರೆಗೆ ಇಳಿಕೆ ಮಾಡಿದ್ದ ಮಾರುತಿ ಸುಜುಕಿ ಇದೀಗ ಬಲೆನೋ ಬೆಲೆಯಲ್ಲಿ ಭಾರೀ ಕಡಿತಗೊಳಿಸಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಕಾರ್ಪೊರೆಟ್‌ ತೆರಿಗೆ ಕಡಿತ, ಮಾರುತಿ ಕಾರು ಬೆಲೆಯಲ್ಲಿ ಇಳಿಕೆ!

ಬಲೆನೋ ಮಾಡೆಲ್‌ಗಳ ಕನಿಷ್ಠ ಬೆಲೆ 7.88 ಲಕ್ಷ ರು.ನಿಂದ ಆರಂಭಗೊಳ್ಳಲಿದೆ.