Asianet Suvarna News Asianet Suvarna News

ತಯಾರಾದ ಕಾರು, ಬೈಕ್‌ ಕೊಳ್ಳುವವರೇ ಇಲ್ಲ!

50000 ಕೋಟಿ ಮೌಲ್ಯದ ಕಾರು, ಬೈಕ್‌ ಶೋ ರೂಂ, ಗೋದಾಮುಗಳಲ್ಲೇ ಬಾಕಿ!  ಮಾರಾಟಕ್ಕಾಗಿ ಕಾದಿವೆ 5 ಲಕ್ಷ ಕಾರು, 30 ಲಕ್ಷ ಬೈಕ್‌ಗಳು, 2 ತಿಂಗಳು ಉತ್ಪಾದನೆ ಸ್ಥಗಿತಕ್ಕೆ ಪ್ರಮುಖ ಕಂಪನಿಗಳ ನಿರ್ಧಾರ

Many unsold cars in India automakers are taking forced holidays
Author
Bengaluru, First Published Jun 13, 2019, 8:57 AM IST | Last Updated Jun 13, 2019, 8:57 AM IST

ನವದೆಹಲಿ: ಆರ್ಥಿಕತೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ದೇಶದ ಆಟೋಮೊಬೈಲ್‌ ಉದ್ಯಮ ಭಾರೀ ಹೊಡೆತ ತಿಂದಿದೆ. ದೇಶದ ವಿವಿಧ ಗೋದಾಮು ಮತ್ತು ಶೋರೂಂಗಳಲ್ಲಿ 50000 ಕೋಟಿ ರು.ಮೌಲ್ಯದ ಕಾರು ಮತ್ತು ಬೈಕ್‌ಗಳು ಮಾರಾಟವಾಗದೇ ಉಳಿದುಕೊಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

2019ರ ಜೂನ್‌ ಗಣತಿ ಪ್ರಕಾರ, ಕಳೆದ 7 ತಿಂಗಳುಗಳಿಂದ ನಿರಂತರವಾಗಿ ಕಾರು ಮತ್ತು ಬೈಕ್‌ಗಳ ಮಾರಾಟ ಕುಸಿತ ಕಾಣುತ್ತಲೇ ಇದೆ. ಪರಿಣಾಮ ಸುಮಾರು 35 ಸಾವಿರ ಕೋಟಿ ರು. ಮೌಲ್ಯದ 5 ಲಕ್ಷ ಕಾರುಗಳು ಹಾಗೆಯೇ ಮಾರಾಟಕ್ಕೆ ಕಾದು ಕುಳಿತಿವೆ. ಅದೇ ರೀತಿ 17 ಸಾವಿರ ಕೋಟಿ ರು. ಮೌಲ್ಯದ 30 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗದೆಯೇ ಗೋದಾಮು ಮತ್ತು ಶೋರೂಂನಲ್ಲೇ ಉಳಿದಿದೆ. ಹೀಗಾಗಿ, ಭಾರತದಲ್ಲಿರುವ ದ್ವಿಚಕ್ರ ವಾಹನ ಹಾಗೂ ಕಾರುಗಳ ಉತ್ಪಾದನಾ ಕಂಪನಿಗಳು 2 ತಿಂಗಳ ಕಾಲ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿವೆ. ಅಲ್ಲದೆ, ಮಾರುತಿ ಸುಜುಕಿ, ಮಹಿಂದ್ರಾ ಹಾಗೂ ಟಾಟಾ ಮೋಟರ್ಸ್‌ ಕಂಪನಿಗಳು ಮೇ ತಿಂಗಳಿನಿಂದಲೇ ತಮ್ಮ ಉತ್ಪಾದಕ ಘಟಕಗಳನ್ನು ಸ್ಥಗಿತಗೊಳಿಸಿವೆ ಎಂಬುದು ತಿಳಿದುಬಂದಿದೆ.

Many unsold cars in India automakers are taking forced holidays

ಮಹೀಂದ್ರ ಆಟೋ ಕಿ.ಮೀ. ಕೇವಲ 50 ಪೈಸೆ

ಕಾರಣಗಳೇನು?

ದೇಶದಲ್ಲಿ ನಿಧಾನಗತಿಯಾಗಿ ಏರಿಕೆಯಾಗುತ್ತಿರುವ ಉದ್ಯೋಗಿಗಳ ಸಂಖ್ಯೆ. ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು. ಆರ್ಥಿಕ ಕಂಪನಿಗಳಲ್ಲಿ ಉಂಟಾಗಿರುವ ನಗದು ವ್ಯವಹಾರದ ಹಣದುಬ್ಬರ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕುಸಿಯುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾರ್ನ್ ಮಾಡದೇ 2 ಸಾವಿರ ಕಿ.ಮೀ.ಕ್ರಮಿಸಿದ ಕಾರು

Latest Videos
Follow Us:
Download App:
  • android
  • ios