ನವದೆಹಲಿ(ಏ.02): ಮಾರುತಿ ಸುಜುಕಿ ಸಂಸ್ಥೆಯ ಇಕೋ ಕಾರು ಇದೀಗ ಹೆಚ್ಚುವರಿ ಸುರಕ್ಷತಾ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಇದು ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ಹಾಗೂ ಏರ್‌ಬ್ಯಾಗ್ ಸೇರಿದಂತೆ ಸುರಕ್ಷತೆ ಸೌಲಭ್ಯ ಹೊಂದಿರುವ ಭಾರತದ ಅತ್ಯಂತ ಕಡಿಮೆ ಬೆಲೆಯ 8 ಸೀಟರ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬೆದರಿಕೆಯಿಂದ ಕಿಯಾ ಮೋಟಾರ್ಸ್ ಆಂಧ್ರಕ್ಕೆ- ಚಂದ್ರಬಾಬು ನಾಯ್ಡು!

ನೂತನ ಮಾರುತಿ ಇಕೋ ಬೆಲೆ 3.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗಲಿದ್ದು, ಟಾಪ್ ಮಾಡೆಲ್ ಬೆಲೆ 4.65 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಹಳೇ ಇಕೋ ಕಾರಿಗಿಂತ ಬೇಸ್ ಮಾಡೆಲ್ ಬೆಲೆಯಲಲಿ 23,000 ರೂಪಾಯಿ ಏರಿಕೆಯಾಗಿದೆ. ಇನ್ನುಳಿದ ಯಾವುದೇ ವೇರಿಯೆಂಟ್‌ಗಳಲ್ಲಿ ಬೆಲೆ ಏರಿಕೆ ಮಾಡಿಲ್ಲ.

ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಸ್ಟಮ್ ಕಾರು ಅನಾವರಣ!

ಮಾರುತಿ ಇಕೋ 5 ಸೀಟರ್ ಹಾಗೂ 8 ಸೀಟರ್ ಕಾರು ಲಭ್ಯವಿದೆ. ಇಷ್ಟೇ ಅಲ್ಲ ಪೆಟ್ರೋಲ್ ಹಾಗೂ CNG ಆಯ್ಕೆಕೂಡ ಇದೆ. ನೂತನ ಇಕೋ ಕಾರು  1.2 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು,   73 Bhp ಪವರ್ ಹಾಗೂ 101 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.