ನವದೆಹಲಿ(ಆ.09): ಕೊರೋನಾ ವೈರಸ್ ಕಾರಣ ಹಲವು ಅಡೆ ತಡೆ ಎದುರಿಸಿದ ಭಾರತೀಯ ಆಟೋಮೇಕರ್ಸ್ ಇದೀಗ ಚೇತರಿಕೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸುಜುಕಿ ಅರೆನಾ ಡೀಲರ್‌ಶಿಪ್‌ಗಳಲ್ಲಿ ಈ ಆಫರ್ ಲಭ್ಯವಿದೆ. ಈ ಮೂಲಕ ದೇಶಾದ್ಯಂತ ಮಾರುತಿ ಸುಜುಕಿ ಕಾರು ಮಾರಾಟ ಹೆಚ್ಚಿಸಲು ಪ್ಲಾನ್ ಮಾಡಲಾಗಿದೆ.

ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ; ಕ್ರೆಟಾ, ಸೆಲ್ಟೋಸ್ ಕಾರಿಗಿಂತ ಕಡಿಮೆ ಬೆಲೆ!

ಮಾರುತಿ ಅಲ್ಟೋ, ಬ್ರೆಜಾ, ಡಿಸೈರ್ ಸೇರಿದಂತೆ ಬಹುತೇಕ ಮಾರುತಿ ಕಾರಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಮಾರುತಿ ಅಲ್ಟೋ ಟಾಪ್ ಮಾಡೆಲ್ ಕಾರಿಗೆ 18,000 ರೂಪಾಯಿ ನಗದು ಡಿಸ್ಕೌಂಟ್, 15,000 ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಘೋಷಿಸಲಾಗಿದೆ.

ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!.

ಮಾರುತಿ ಸುಜುಕಿ ಸೆಲೆರಿಯೋ ಕಾರಿಗೆ 30,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 20,000 ಎಕ್ಸ್‌ಚೇಂಜ್ ಬೋನಸ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ನೀಡಲಾಗಿದೆ. ಮಾರುತಿ ಇಕೋ ಕಾರಿಗೆ  10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 20,000 ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಪ್ರಕಟಿಸಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೋ CNG ಕಾರು ಬಿಡುಗಡೆ!.

ಮಾರುತಿ ಎಸ್ ಪ್ರೆಸ್ಸೋ ಕಾರಿಗೆ 25,000 ರೂಪಾಯಿ ಕ್ಯಾಶ್ ರಿಯಾಯಿತಿ, 20,000 ರೂಪಾಯಿ ಎಕ್ಸ್‌ಚೇಂಜ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ರಿಯಾಯಿತಿ ನೀಡಲಾಗಿದೆ.  ವ್ಯಾಗನ್ಆರ್ ಕಾರಿಗೆ 10,000 ರೂಪಾಯಿ ಡಿಸ್ಕೌಂಡ್, 20,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಮಾರುತಿ ಸುಜುಕಿ ಸ್ಪಿಫ್ಟ್ ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 20,000 ರೂಪಾಯಿ ಎಕ್ಸ್‌ಚೇಂಜ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ. ಡಿಸೈರ್ ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 25,000 ರೂಪಾಯಿ ಎಕ್ಸ್‌ಚೇಂಜ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ. ಮಾರುತಿ ಬ್ರೆಜ್ ಹಾಗೂ ಎರ್ಟಿಗಾ ಕಾರಿಗೂ ಆಫರ್ ನೀಡಲಾಗಿದೆ. ಈ ಎರಡು ಕಾರಿಗೆ ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ಹಾಗೂ ಕಾರ್ಪೋರೇಟ್ ಡಿಸ್ಕೌಂಟ್ ಆಫರ್ 5,000 ರೂಪಾಯಿ ನೀಡಲಾಗಿದೆ.

ಸೂಚನೆ: ಸಮೀಪದ ಸುಜುಕಿ ಅರೆನಾ ಡೀಲರ್‌ಬಳಿ ಆಫರ್ ಹಾಗೂ ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ