ಕುಸಿದ ಆಟೋಮೊಬೈಲ್‌ಗೆ ಜೀವಜಲ; GST ಕಡಿತಕ್ಕೆ ಮುಂದಾದ ಕೇಂದ್ರ!

ಭಾರತದಲ್ಲಿ ಕಾರು, ಬೈಕ್ ಸೇರಿದಂತೆ ಆಟೋಮೊಬೈಲ್ ತಯಾರಿಕಾ ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಪ್ರತಿ ದಿನ ಸಾವಿರಕ್ಕೂ ಹೆಚ್ಚು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಆಟೋಮೊಬೈಲ್ ಮೇಲಿನ GST ಕಡಿತಕ್ಕೆ ಮುಂದಾಗಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

Central government  propose gst cut on automobiles says Nirmala Sitharaman

ಚೆನ್ನೈ(ಸೆ.01): ಭಾರತದ ಆಟೋಮೊಬೈಲ್ ಕ್ಷೇತ್ರ ಪಾತಾಳಕ್ಕೆ ಕುಸಿದು 6 ತಿಂಗಳೇ ಕಳೆದಿದೆ. ಕಳೆದ 18 ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಕಂಪನಿಗಳು ಈ ರೀತಿ ಉದ್ಯೋಗ ಕಡಿತ, ಉತ್ಪಾದನಾ ಸ್ಥಗಿತಗೊಳಿಸಿಲ್ಲ. ಆದರೆ ಈ ಬಾರಿ ಆಟೋಕಂಪನಿಗಳು, ಇದನ್ನೇ ನೆಚ್ಚಿಕೊಂಡಿರುವ ಬಿಡಿಭಾಗ ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿನ ಹಿನ್ನಡೆ ಇದೀಗ ಭಾರತದ ಸಂಪೂರ್ಣ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಇದೀಗ ಕೇಂದ್ರ ಸರ್ಕಾರ ಕುಸಿದ ಆಟೋಮೊಬೈಲ್ ಕ್ಷೇತ್ರಕ್ಕೆ ಪುನ್ಚೇತನ ನೀಡಲು ಮುಂದಾಗಿದೆ.

ಇದನ್ನೂ ಓದಿ: ಆರ್ಥಿಕ ಹಿಂಜರಿತ ಸರಿಪಡಿಸಲು ಆನಂದ್ ಮಹೀಂದ್ರ ನೀಡಿದ್ರು ಸೂತ್ರ!

ಆಟೋಮೊಬೈಲ್ ಕಂಪನಿ ಪುನರುಜ್ಜೀವನಗೊಳಿಸಲು GST ಕಡಿತ ಮಾಡಬೇಕು ಅನ್ನೋ ಆಗ್ರಹ ಕಳೆದೊಂದು ವರ್ಷದಿಂದ ಕೇಳಿ ಬರುತ್ತಿದೆ. ಕಾರು, ಬೈಕ್ ವಾಹನ, ಬಿಡಿಭಾಗಗಳ ಮೇಲೆ ಶೇಕಡಾ 28  GST(ತೆರಿಗೆ) ವಿಧಿಸಲಾಗುತ್ತಿದೆ. ಇದೀಗ 28 ರಿಂದ 18% ಇಳಿಸಲು ಮನವಿ ಮಾಡಲಾಗಿದೆ. ಇಷ್ಟು ದಿನ  GST ಕಡಿತದ ಕುರಿತು  ಯೋಚಿಸಿದ ಕೇಂದ್ರ ಸರ್ಕಾರ ಇದೀಗ ಆಟೋಮೊಬೈಲ್ ಕ್ಷೇತ್ರದ  GST ಕಡಿತಕ್ಕೆ ಪ್ರಸ್ತಾವನೆ ಇಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  GST ಕಡಿತ ಪ್ರಸ್ತಾವನೆಯನ್ನು  GST ಕೌನ್ಸಿಲ್‌ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!

ಕುರಿತು ಚೆನ್ನೈನಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, GST ಕಡಿತ ನನ್ನ ಕೈಯಲ್ಲಿ ಇಲ್ಲ. ಆಟೋಮೊಬೈಲ್ ಕಂಪನಿಗಲ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿದ್ದೇನೆ. ಈ ಕುರಿತು ವರದಿ ತಯಾರಿಸಿ GST ಕೌನ್ಸಿಲ್‌ಗೆ ನೀಡಿದ್ದೇನೆ. ಆಟೋಮೊಬೈಲ್ ಮೇಲಿನ GST ಕಡಿತಗೊಳಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೌನ್ಸಿಲ್ ತಿರ್ಮಾನ ಅಂತಿಮ ಎಂದು ಸೀತಾರಾಮನ್ ಹೇಳಿದರು.

ಸೆಪ್ಟೆಂಬರ್ 20 ರಂದು ಗೋವಾದಲ್ಲಿ GST ಕೌನ್ಸಿಲ್ ಸಭೆ ಸೇರಲಿದೆ. ಈ ವೇಳೆ ಭಾರತದ ಆರ್ಥಿಕತೆ ಮೇಲೆ GST ಪರಿಣಾಮ, ಆಟೋಮೊಬೈಲ್ ಕ್ಷೇತ್ರದ GST ಕಡಿತ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿವೆ. 
 

Latest Videos
Follow Us:
Download App:
  • android
  • ios