ಕೋಲ್ಕತ್ತಾ(ಸೆ.11): ಕೇಂದ್ರ ಸರ್ಕಾರದ ನೂತನ ಮೋಟಾರು​ ವಾಹನ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದು ದೂರಿರುವ ಮಮತಾ,  ಈ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಟಿಎಂಸಿ ಈ ಹಿಂದೆಯೇ ಸಂಸತ್ತಿನಲ್ಲಿ ಮೋಟರ್​ ವಾಹನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದು, ಜನರ ಭಾವನೆಗೆ ಧಕ್ಕೆಯಾಗುವ ಈ ಅಸಂವಿಧಾನಿಕ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.