ನವದೆಹಲಿ(ಜು.02): ಸಬ್ ಕಾಂಪಾಕ್ಟ್ SUV ಸೆಗ್ಮೆಂಟ್‌ಗಳಲ್ಲಿ ಪ್ರಬಲ ಪೈಪೋಟಿ ಇದ್ದರೂ ಮಹೀಂದ್ರ XUV300 ಕಾರು ನಿರೀಕ್ಷಿತ ಯಶಸ್ಸು ಸಾಧಿಸಿದೆ. ಮಾರುತಿ ಸುಜುಕಿ ಬ್ರೆಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ ಮಹೀಂದ್ರ XUV300 ಕಾರು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಯಶಸ್ಸಿನ ಬೆನ್ನಲ್ಲೇ ಮಹೀಂದ್ರ XUV300 AMT(ಆಟೋಮ್ಯಾಟಿಕ್) ಕಾರು ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಹಾವಿನಾಟ- ಒಳಗಿದ್ದವರಿಗೆ ಪ್ರಾಣಸಂಕಟ!

2019ರ ಆರಂಭದಲ್ಲಿ ಮಹೀಂದ್ರ XUV300 ಕಾರು ಬಿಡುಗಡೆ ಮಾಡಿತ್ತು. ಕೇವಲ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಮಾತ್ರ ಲಭ್ಯವಿತ್ತು. ಇದೀಗ AMT ವೇರಿಯೆಂಟ್ ಮಾರುಕಟ್ಟೆ ಪ್ರವೇಶಿಸಿದೆ. ಮಹೀಂದ್ರ XUV300 AMT ಕಾರು  W8 and W8(O) ವೇರಿಯೆಂಟ್ ಲಭ್ಯವಿದೆ. ಮ್ಯಾನ್ಯುಯೆಲ್ ವೇರಿಯೆಂಟ್‌ನಲ್ಲಿ  W8 and W8(O)ಪೆಟ್ರೋಲ್ ಹಾಗೂ ಡೀಸೆಲ್ ಲಭ್ಯವಿದೆ. ಆದರೆ AMT ಕಾರಿನಲ್ಲಿ ಡೀಸೆಲ್ ಮಾತ್ರ ಲಭ್ಯವಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ನೂತನ ರೆನಾಲ್ಟ್ ಡಸ್ಟರ್- ಇಲ್ಲಿದೆ ವಿಶೇಷತೆ, ಬೆಲೆ!

ಮಹೀಂದ್ರ  XUV300 AMT W8 ಕಾರಿನ ಬೆಲೆ 11.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನುW8(O) ವೇರಿಯೆಂಟ್ ಬೆಲೆ 12.7   ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಟಾಟಾ ನೆಕ್ಸಾನ್ AMT ಕಾರಿನ ಬೆಲೆಗಿಂತ 1.76 ಲಕ್ಷ ರೂಪಾಯಿ ಹೆಚ್ಚು. ಟಾಟಾ ನೆಕ್ಸಾನ್ AMT ಕಾರಿನ ಬೆಲೆ 10. 79 ಲಕ್ಷ ರೂಪಾಯಿ.