ನ್ಯೂಯಾರ್ಕ್(ಜ.24): ಮಹೀಂದ್ರ ಆಟೋಮೊಬೈಲ್ ಕಂಪನಿ ಜೀಪ್‌ಗೆ ಹೆಸರುವಾಸಿ. ಈಗಾಗಲೇ ಅಮೆರಿಕಾದಲ್ಲಿ ರೋಕ್ಸರ್ ಜೀಪ್ ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. 2 ವರ್ಷಗಳ ಹಿಂದೆ ರೋಕ್ಸರ್ ಜೀಪ್ ಬಿಡುಗಡೆ ಮಾಡಿದ್ದ ಮಹೀಂದ್ರ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಫಿಯೆಟ್ ವಿರುದ್ಧ ಕಾನೂನು  ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ ಕಾರಣ ಮಹೀಂದ್ರ ಅನಿವಾರ್ಯವಾಗಿ ರೋಕ್ಸರ್ ಜೀಪ್ ವಿನ್ಯಾಸ ಬದಲಾಯಿಸಿದೆ.

ಇದನ್ನೂ ಓದಿ: ಭಾರತದ ಮಹೀಂದ್ರ ಜೀಪ್‌ಗೆ ಬೆಚ್ಚಿ ಬಿತ್ತು ಅಮೇರಿಕಾದ ಫಿಯೆಟ್!

ಮಹೀಂದ್ರ -ಫಿಯೆಟ್ ಕಾನೂನು ಹೋರಾಟ
ಮಹೀಂದ್ರ ಬಿಡುಗಡೆ  ಮಾಡಿದ ರೋಕ್ಸರ್ ಜೀಪ್ ವಿನ್ಯಾಸಕ್ಕೆ ಫಿಯೆಟ್ ಕ್ಲಿಸ್ಲರ್ ಕಂಪನಿ ಆಕ್ಷೇಪ ಎತ್ತಿತ್ತು. ಮಹೀಂದ್ರ ರೋಕ್ಸರ್ ಜೀಪ್, ಫಿಯೆಟ್ ಕಂಪನಿ ಎರಡನೇ ಮಹಾಯುದ್ಧದ ವೇಳೆ ಬಿಡುಗಡೆ ಮಾಡಿದ ವಿಲೆ ಜೀಪ್ ಹೋಲುತ್ತಿದೆ. ವಿನ್ಯಾಸ ನಕಲು ಮಾಡಲಾಗಿದೆ ಎಂದು ದೂರು ನೀಡಿತ್ತು. ತಕ್ಷಣವೇ ರೋಕ್ಸರ್ ಜೀಪ್ ಮಾರಾಟಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿತ್ತು.

ಮೊದಲು ಬಿಡುಗಡೆ ಮಾಡಿದ ಮಹೀಂದ್ರ ರೋಕ್ಸರ್ ಜೀಪ್

ಇದನ್ನೂ ಓದಿ: ಮಹೀಂದ್ರ XUV300 ಕ್ರಾಶ್ ಟೆಸ್ಟ್ ರಿಸಲ್ಟ್ ಬಹಿರಂಗ; ಭಾರತದ ಮತ್ತೊಂದು ಸೇಫ್ಟಿ ಕಾರು!

ಕಳೆದೆರಡು ವರ್ಷದಿಂದ ಕಾನೂನು ಹೋರಾಟ ನಡೆಯುತ್ತಿದೆ. ಇದೀಗ ಅಂತಿಮ ಘಟ್ಟ ತಲುಪಿದ್ದು, ಮಹೀಂದ್ರಗೆ ಹಿನ್ನಡೆಯಾಗಿದೆ. ಹೀಗಾಗಿ ಮಹೀಂದ್ರ ರೋಕ್ಸರ್ ಫೇಸ್‌ಲಿಫ್ಟ್ ಜೀಪ್ ಬಿಡುಗಡೆ  ಮಾಡಿದೆ. ಇದರಲ್ಲಿ ವಿನ್ಯಾಸ್ ಸಂಪೂರ್ಣ ಬದಲಾಯಿಸಲಾಗಿದೆ. 

ಆದರೆ ನೂತನವಾಗಿ ಬಿಡುಗಡೆ ಮಾಡಿರುವ ರೋಕ್ಸರ್ ಜೀಪ್, 1977 ಟೊಯೊಟಾ ಲ್ಯಾಂಡ್ ಕ್ರೂಸರ್  FJ40 ವಿನ್ಯಾಸ ಹೋಲುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.