ಭಾರತದ ಮಹೀಂದ್ರ ಜೀಪ್‌ಗೆ ಬೆಚ್ಚಿ ಬಿತ್ತು ಅಮೇರಿಕಾದ ಫಿಯೆಟ್!
ಭಾರತದ ಮಹೀಂದ್ರ ಜೀಪ್ ಇದೀಗ ಅಮೇರಿಕಾದ ಫಿಯೆಟ್ ಕಂಪೆನಿಗೆ ನಡುಕು ಹುಟ್ಟಿಸಿದೆ. ಅಮೇರಿಕಾ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಯತ್ನಿಸಿರುವ ಮಹೀಂದ್ರ ಜೀಪನ್ನ ನಿಷೇಧಿಸಲು ಫಿಯೆಟ್ ಮುಂದಾಗಿದೆ.
ಟೊಲೆಡೊ(ಆ.03): ಭಾರತದ ಖ್ಯಾತ ಜೀಪ್ ಹಾಗೂ ಎಸ್‌ಯುವಿ ಕಾರು ತಯಾರಿಕಾ ಕಂಪೆನಿ ಮಹೀಂದ್ರ ಇತರ ದೇಶದಲ್ಲೂ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಅಮೇರಿಕಾದ ಮಶಿಗಾನ್‌ನಲ್ಲಿ ಮಹೀಂದ್ರ ಅತೀ ದೊಡ್ಡ ಘಟಕ ಹೊಂದಿರುವ ಮಹೀಂದ್ರಾಗೆ ಇದೀಗ ಅಮೇರಿಕಾದಿಂದಲೇ ಆಪತ್ತು ಎದುರಾಗಿದೆ. ಮಹೀಂದ್ರ ಸಂಸ್ಥೆಯ ರೊಕ್ಸೋರ್ ಜೀಪ್ ಇದೀಗ ಅಮೇರಿಕಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ರೆಟ್ರೋ ಲುಕ್, ಹೊಸ ತಂತ್ರಜ್ಞಾನ ಹೊಂದಿರುವ ರೊಕ್ಸೊರ್ ಗ್ರಾಹಕರ ನೆಚ್ಚಿನ ಜೀಪ್ ಆಗಿ ಮಾರ್ಪಟ್ಟಿದೆ. ಇದೀಗ ಈ ರೊಕ್ಸೊರ್ ಜೀಪ್ ನಿಷೇಧದ ಭೀತಿ ಎದುರಿಸುತ್ತಿದೆ.
ಮಹೀಂದ್ರ ಕಂಪೆನಿಯ ರೊಕ್ಸೋರ್ ಜೀಪ್ ಇದೀಗ ಅಮೇರಿಕಾದಲ್ಲಿ ನಿಷೇಧವಾಗೋ ಸಾಧ್ಯತೆ ಇದೆ. ಆಗಸ್ಟ್ 1 ರಂದು ಮಹೀಂದ್ರ ಸಂಸ್ಥೆಯ ರೋಕ್ಸರ್ ಜೀಪ್ ನಿಷೇಧಿಸಬೇಕೆಂದು ಅಮೇರಿಕಾದ ಫಿಯೆಟ್ ಕಂಪೆನಿ ದೂರು ದಾಖಲಿಸಿದೆ.
ಫಿಯೆಟ್ ಕ್ರಿಸ್ಲರ್ ದಾಖಲಿಸೋ ದೂರಿನ ಪ್ರಕಾರ, ಮಹೀಂದ್ರ ಸಂಸ್ಥೆಯ ರೊಕ್ಸೊರ್ ಜೀಪ್, ಫಿಯೆಟ್ ಸಂಸ್ಥೆ ಹಳೆ ವಿಲೆ ಜೀಪ್ ಹೋಲುತ್ತಿದೆ. ಎರಡನೆ ಯುದ್ದದ ವೇಳೆ ಫಿಯೆಟ್ ಕಂಪೆನಿ ತಯಾರಿಸಿದ ವಿಲೆ ಜೀಪ್ ವಿನ್ಯಾಸವನ್ನ ಮಹೀಂದ್ರ ನಕಲು ಮಾಡಿದೆ. ಹೀಗಾಗಿ ತಕ್ಷಣವೇ ಮಹೀಂದ್ರ ಕಂಪೆನಿಯ ಜೀಪ್ ನಿಷೇಧಿಸಬೇಕು ಎಂದು ದೂರು ಸಲ್ಲಿಸಿದೆ.
ಫಿಯೆಟ್ ಕಂಪೆನಿ ಇದೀಗ ಹೊಸದಾಗಿ ಜೀಪ್ ಕಂಪಾಸ್ ಕಾರನ್ನ ಮಾರುಕಟ್ಟೆಗೆ ಬಿಟ್ಟಿದೆ. ಭಾರತದಲ್ಲೂ ಜೀಪ್ ಕಂಪಾಸ್ ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದೀಗ ಮಹೀಂದ್ರ ಸಂಸ್ಥೆಯ ರೊಕ್ಸರ್ ಜೀಪ್, ಫಿಯೆಟ್ ಸಂಸ್ಥೆಯ ಜೀಪ್ ಕಂಪಾಸ್‌ಗೆ ಭಾರಿ ಪೈಪೋಟಿ ನೀಡಲಿದೆ ಅನ್ನೋ ಕಾರಣದಿಂದ ಫಿಯೆಟ್ ದೂರು ದಾಖಲಿಸಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಅಮೇರಿಕಾ ಟ್ರೇಡ್ ಕಮಿಶನ್‌ಗೆ ಫಿಯೆಟ್ ದೂರು ನೀಡಿದೆ.