50 ಸಾವಿರಕ್ಕೆ ಬುಕ್ ಮಾಡಿ ಫಾರ್ಚುನರ್ ಪ್ರತಿಸ್ಪರ್ಧಿ ಮಹೀಂದ್ರ ಅಲ್ಟುರಾಸ್!

ಟೊಯೊಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ ಅಲ್ಟುರಾಸ್ ರಸ್ತೆಗಳಿಯುತ್ತಿದೆ. ಈಗಾಗಲೇ ಮಹೀಂದ್ರ ಬಿಡುಗಡೆ ದಿನಾಂಕ ಪ್ರಕಟಿಸಿದೆ. ಇಷ್ಟೇ ಅಲ್ಲ ಬುಕಿಂಗ್ ಕೂಡ ಆರಂಭಿಸಿದೆ.
 

Mahindra Alturas G4 Bookings Open Launch Date Announced

ಮುಂಬೈ(ನ.06): ಟೊಯೊಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಗೊಳ್ಳುತ್ತಿರುವ ಮಹೀಂದ್ರ ಅಲ್ಟುರಾಸ್ G4 ಕಾರಿನ ಬುಕಿಂಗ್ ಆರಂಭಗೊಂಡಿದೆ. ಈ ಮೂಲಕ ಭಾರತದಲ್ಲಿ ಲಕ್ಸುರಿ ಹಾಗೂ ಸುರಕ್ಷತೆಗೆ ಹೆಸರಾಗಿದ್ದ ಫಾರ್ಚುನರ್ ಕಾರಿಗೆ ಸೆಡ್ಡು ಹೊಡೆಯಲು ಮಹೀಂದ್ರ ತಯಾರಾಗಿದೆ. ನವೆಂಬರ್ 24 ರಂದು ನೂತನ ಮಹೀಂದ್ರ ಅಲ್ಟುರಾಸ್ G4 ಕಾರು ಬಿಡುಗಡೆಯಾಗುತ್ತಿದೆ. 50,000 ರೂಪಾಯಿ ಪಾವತಿಸಿ  ಅಲ್ಟುರಾಸ್ G4 ಕಾರನ್ನ ಬಕ್ ಮಾಡಬಹುದಾಗಿದೆ. ಮಹೀಂದ್ರ ಶೋ ರೂಂ ಅಥವಾ ಮಹೀಂದ್ರ ವೆಬ್‌ಸೈಟ್ ಮೂಲಕ ಅಲ್ಟುರಾಸ್ G4 ಕಾರನ್ನ ಬುಕ್ ಮಾಡಲು ಅವಕಾಶವಿದೆ.

Mahindra Alturas G4 Bookings Open Launch Date Announced

ಈಗಾಗಲೇ ಹಲವು ಬಾರಿ ಮಹೀಂದ್ರ ಈ ಕಾರಿನ ಹೆಸರು ಬದಲಾಯಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೆಸರಿಗೆ ಸಿಗುತ್ತಿರುವ ಸ್ಪಂದನೆ ಕುರಿತು ಅಧ್ಯಯನ ನಡೆಸುತ್ತಿದೆ. ಕಳೆದ ತಿಂಗಳು ಇನ್‌ಫೆರೆನೋ ಎಂದು ಹೆಸರಿಟ್ಟಿದ್ದ ಮಹೀಂದ್ರ ಇದೀಗ ಬಳಿಕ ಅಲ್ಟುರಾಸ್ ಹೆಸರಿಟ್ಟಿದೆ. ಇದೀಗ ಅಲ್ಟುರಾಸ್ ಹೆಸರು ಅಂತಿಮಗೊಳಿಸಿದೆ. ಈ ಮೂಲಕ ಮಹೀಂದ್ರ ಸಂಸ್ಥೆ 'ಒ'(ಇಂಗ್ಲೀಷ್ ಅಕ್ಷರ 'O')ಅಂತ್ಯವಾಗೋ ಹೆಸರಿನ ಬದಲು ಹೊಸ ಎಸ್(S)ಹೆಸರನ್ನ ಆಯ್ಕೆ ಮಾಡಿದಂತಾಗುತ್ತದೆ.

ಮಹೀಂದ್ರ ಸಂಸ್ಥೆಯ ಬಹುತೇಕ ಎಲ್ಲಾ ಕಾರು ಹಾಗೂ ಬೈಕ್‌ಗಳು. ಹೆಸರು ಅಂತ್ಯವಾಗೋದು ಇಂಗ್ಲೀಷ್ ವರ್ಣಮಾಲೆಯ 'O' ಅಕ್ಷರದಿಂದ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಮರಾಜೋ(Marazzo) ಕಾರು ಕೂಡ ಹೊರತಲ್ಲ. ಆದರೆ ಇದೀಗ ನೂತನ ಫಾರ್ಚುನರ್ ಪ್ರತಿಸ್ಪರ್ಧಿ ಕಾರಿಗೆ ಅಲ್ಟುರಾಸ್ ಹೆಸರಿಡೋ ಮೂಲಕ ತಮ್ಮ ಸಂಪ್ರದಾಯ ಮುರಿಯುವ ಸಾಧ್ಯತೆ ಇದೆ.

ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡೆವರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರ ಕಂಪನಿಯ ಈ ಕಾರು 25 ಲಕ್ಷ  ರೂಪಾಯಿ ಎಂದು ಅಂದಾಜಿಸಲಾಗಿದೆ.  2.2 ಲೀಟರ್ ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್, 187 bhp ಹಾಗೂ 420nm ಟಾರ್ಕ್ ಉತ್ಪಾದಿಸಲಿದೆ.

7  ಸ್ಪೀಡ್ ಗೇರ್ ಹಾಗೂ AMT ಆಯ್ಕೆ ಕೂಡ ಹೊಂದಿದೆ. ಈ ಮೂಲಕ  ಮಹೀಂದ್ರ 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್  ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 9 ಏರ್‌ಬ್ಯಾಗ್, ABS+EBD, ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.
 

Latest Videos
Follow Us:
Download App:
  • android
  • ios