ಜಮ್ಮು ಮತ್ತು ಕಾಶ್ಮೀರದ ಕೊನೆಯ ಮಹರಾಜ ಹರಿ ಸಿಂಗ್ ಬಳಸಿದ ವಿಂಟೇಜ್ ಕಾರು ಇದೀಗ ಹರಾಜಿಗೆ ಇಡಲಾಗಿದೆ. 1924ರಲ್ಲಿ ಬಳಸಿದ ಈ ಕಾರಿಗೆ ಇದೀಗ ಭಾರಿ ಬೇಡಿಕೆ ಬಂದಿದೆ. ಇಲ್ಲಿದೆ ಈ ಹರಾಜಿನ ಮಾಹಿತಿ.
ಲಂಡನ್(ನ.02): ಜಮ್ಮು ಮತ್ತು ಕಾಶ್ಮೀರದ ಕೊನೆಯ ಮಹರಾಜ ಹರಿ ಸಿಂಗ್ ಬಳಸಿದ್ದ ಹಳೆ ವಿಂಟೇಜ್ ಕಾರು ಹರಾಜಿಗೆ ಇಡಲಾಗಿದೆ. ಡಿಸೆಂಬರ್ 2 ರಂದು ಲಂಡನ್‌ನ ಬೊನಾಮಸ್ ಬಾಂಡ್ ಸ್ಟ್ರೀಟ್ ಸೇಲ್ ಹರಾಜಿನಲ್ಲಿ ಹರಿ ಸಿಂಗ್ ಅವರ 1924ರ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಕಾರು ಹರಾಜಾಗಲಿದೆ.
ಹರಾದಿನಲ್ಲಿ ಈ ಕಾರು 3.5 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಬಾಂಡ್ ಸ್ಟ್ರೀಟ್ ಸ್ಟೋರ್ ರೂಂ ನಲ್ಲಿ ಈ ಕಾರನ್ನ ಪ್ರದರ್ಶನಕ್ಕೆ ಇಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನ ತರೋ ಮೂಲಕ ಜನಪ್ರಿಯ ರಾಜನಾಗಿ ಗುರುತಿಸಿಕೊಂಡಿದ್ದ ಹರಿ ಸಿಂಗ್, 1925ರಲ್ಲೇ ಖಡ್ಡಾಯ ಶಿಕ್ಷಣ ಪದ್ದತಿ ಜಾರಿಗೆ ತಂದಿದ್ದರು.
Scroll to load tweet…
1948ರಲ್ಲಿ ಜಮ್ಮ ಮುತ್ತು ಕಾಶ್ಮೀರವನ್ನ ಭಾರತದೊಂದಿಗೆ ವಿಲೀನ ಪ್ರಕ್ರಿಯೆಗೆ ಸಹಿ ಹಾಕಿದ ಹರಿ ಸಿಂಗ್ ಕಾಶ್ಮೀರವನ್ನ ಭಾರತದ ಭಾಗವಾಗಿಸಿದರು. ಹರಿ ಸಿಂಗ್ ಬಳಸುತ್ತಿದ್ದ ವಿಂಟೇಜ್ ಕಾರು ಇದೀಗ ಹರಾಜಾಗುತ್ತಿದೆ.
