ನವದೆಹಲಿ(ಫೆ.24): ದಶಕಗಳ ಬಳಿಕ  ಸ್ಕೂಟರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಬಜಾಜ್ 2020ರ ಆರಂಭದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತು. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಮತ್ತೆ ಮಾರುಕಟ್ಟೆ ಪ್ರವೇಶಿಸಿದ ಬಜಾಜ್ ಜನವರಿಯಲ್ಲಿ 197 ಸ್ಕೂಟರ್ ತಯಾರಿಸಲಾಗಿತ್ತು.

ಇದನ್ನೂ ಓದಿ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್; ಇಲ್ಲಿದೆ ಬೆಲೆ, ವಿಶೇಷತೆ!...

197 ಸ್ಕೂಟರ್ ಪೈಕಿ ಜನವರಿಯಲ್ಲಿ ಕೇವಲ 21 ಸ್ಕೂಟರ್ ಮಾರಾಟವಾಗಿದೆ. ಇದು  ಭಾರತದಲ್ಲಿನ ಮಾರಾಟದ ಅಂಕಿ ಅಂಶ. ಜನರು ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಹಿಂದೇಟು ಹಾಕಲು ಮುಖ್ಯ ಕಾರಣ ಬೆಲೆ. ಜನಸಾಮಾನ್ಯರಿಗೆ ಇದು ದುಬಾರಿಯಾಗಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಅರ್ಬನೇಟ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಇನ್ನು ಪ್ರಿಮಿಯಂ ಸ್ಕೂಟರ್ ಬೆಲೆ 1.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಸ್ಕೂಟರ್ 2000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!

2020ರ ಮೇ ತಿಂಗಳಲ್ಲಿ ಕಡಿಮೆ ಬೆಲೆಯ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ  ಮಾಡುವುದಾಗಿ ಕಂಪನಿ ಘೋಷಿಸಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. 3.5 ಗಂಟೆಯಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ.

ಸಂಪೂರ್ಣ ಚಾರ್ಜ್‌ಗೆ ಇಕೋ ಮೂಡ್‌ನಲ್ಲಿ 95 ಕಿ.ಮೀ ಹಾಗೂ ಸ್ಪೋರ್ಟ್ಸ್ ಮೂಡ್‌ನಲ್ಲಿ 85 ಕಿ.ಮೀ ಮೈಲೇಜ್ ನೀಡಲಿದೆ. ದುಬಾರಿ ಬೆಲೆಯಿಂದಾಗಿ ಬಜಾಜ್ ಚೇತಕ್ ಸ್ಕೂಟರ್ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ.