ಹೈದರಾಬಾದ್(ಜು.03): ಇತರ ದೇಶಗಳಿಗೆ ಹೋಲಿಸಿದರೆ ಟ್ರಾಫಿಕ್ ನಿಯಮ ಪಾಲನೆಯಲ್ಲಿ ಭಾರತೀಯರ ನಿರ್ಲಕ್ಷ್ಯವೇ ಹೆಚ್ಚು. ಪೊಲೀಸರು ಇಲ್ಲ ಎಂದಾದರೆ ಸಿಗ್ನಲ್ ರೆಡ್ ಬಿದ್ದಿದ್ದರೂ,  ಒನ್ ವೇ ಆಗಿದ್ದರೂ, ಹೆಲ್ಮೆಟ್ ಇಲ್ಲದಿದ್ದರೂ ಯಾವ ಭಯವೂ ಇಲ್ಲದೆ ಮುಂದೆ ಸಾಗುತ್ತಾರೆ. ಹೀಗಾಗಿ ಭಾರತದಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ದಂಡ  ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ. ಇಷ್ಟಾದರೂ ಟ್ರಾಫಿಕ್ ಪಾಲನೆ ಮಟ್ಟ  ಏರಿಕೆಯಾಗಿಲ್ಲ. ಹೀಗಾಗಿ ಪೊಲೀಸರು ಇದೀಗ ವಾಹನ ಸವಾರರನ್ನು ಎಚ್ಚರಿಸಲು ಹೊಸ ಸಿಗ್ನಲ್ ಪರಿಚಯಿಸಿದ್ದಾರೆ.

ಇದನ್ನೂ ಓದಿ: PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

ಹೈದರಾಬಾದ್‌ನ KBR ಪಾರ್ಕ್ ಜಂಕ್ಷನ್‌ನಲ್ಲಿ ನೂತನ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಜೀಬ್ರಾ ಕ್ರಾಸಿಂಗ್ ಹಿಂದೆ LED ಲೈಟ್ ಅಳವಡಿಸಲಾಗಿದೆ. ಈ ಲೈಟ್ ಕ್ರಾಸಿಂಗ್ ಸಿಗ್ನಲ್ ನೀಡುತ್ತೆ. ಹಸಿರು, ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಈ ಲೈಟ್ ವಾಹನ ಸವಾರರಿಗೆ ಸೂಚನೆ ನೀಡುತ್ತೆ.  ಈ ಲೈಟ್ ಅಳವಡಿಸಲು ಮುಖ್ಯ ಕಾರಣ, ಸಿಗ್ನಲ್ ಲೈಟ್ ರೆಡ್ ಇದ್ದರೂ ವಾಹನ ಸವಾರರು ಸಿಗ್ನಲ್ ಲೆಕ್ಕಿಸದೆ ಮುಂದೆ ಸಾಗುತ್ತಾರೆ. ಇಷ್ಟೇ ಅಲ್ಲ ಜೀಬ್ರಾ ಕ್ರಾಸಿಂಗ್ ಮೇಲೆ ಹಾಗೂ ಜೀಬ್ರಾ ಕ್ರಾಸಿಂಗ್‌ಗಿಂತಲೂ ಮುಂದೆ ಹೋಗಿ ವಾಹನ ನಿಲ್ಲಿಸುತ್ತಾರೆ. ಇದರಿಂದ  ಪಾದಾಚಾರಿಗಳು ರಸ್ತೆ ದಾಟುವುದೇ ಕಷ್ಟವಾಗುತ್ತಿದೆ.

"

ಇದನ್ನೂ ಓದಿ: ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?

ಸಿಗ್ನಲ್ ಬಿದ್ದಾಗ, ಪಾದಾಚಾರಿಗಳು ಸರಾಗವಾಗಿ ರಸ್ತೆ ದಾಟಲು ನೂತನ LED ಸಿಗ್ನಲ್ ಅಳವಡಿಸಲಾಗಿದೆ. ಹೈದರಾಬಾದ್‌ನ KBR ಪಾರ್ಕ್ ಜಂಕ್ಷನ್‌ ಮೂಲಕ ಗರಿಷ್ಠ ವಾಹನ ಹಾಗೂ ಪಾದಾಚಾರಿಗಳು ಸಾಗುತ್ತಾರೆ. ಸಂಜೆ ವೇಳೆ ಇಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸರು ನೂನತ ಸಿಗ್ನಲ್ ಲೈಟ್ ಅಳವಡಿಸಿದ್ದಾರೆ. ಅಳವಡಿಸಿದ 2 ದಿನದಲ್ಲಿ ಸಿಗ್ನಲ್ ಜಂಪ್ ಸಂಖ್ಯೆ ಕಡಿಮೆಯಾಗಿದೆ. ಜಿಬ್ರಾ ಕ್ರಾಸಿಂಗ್ ಹಿಂದೆ ಬಹುತೇಕರು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಗೆರೆ ದಾಡಿ ಮುಂದೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬಂಜಾರಾ ಹಿಲ್ಸ್ ಟ್ರಾಫಿಕ್ ಇನ್ಸೆಪೆಕ್ಟರ್ ಪ್ರಸಾದ್ ರಾವ್ ಹೇಳಿದ್ದಾರೆ.