ನವದೆಹಲಿ(ಜು.31): ಲಾಂಗ್ ರೈಡ್, ಲೇಹ್, ಲಡಾಖ್ ಬೈಕ್ ರೈಡಿಂಗ್ ಮಾಡಬೇಕು ಅನ್ನೋದು ಹಲವರ ಕನಸು. ಇದಕ್ಕಾಗಿ ಉತ್ತಮ ಅಡ್ವೆಂಚರ್ ಬೈಕ್ ಅವಶ್ಯಕತೆ ಇದೆ. ಆದರೆ ದುಬಾರಿ ಬೆಲೆ, ಡೌನ್‌ಪೇಮೆಂಟ್ ಸೇರಿದಂತೆ ಹಲವು ಕಾರಣಗಳಿಂದ ಅಡ್ವೆಂಚರ್ ಬೈಕ್ ಖರೀದಿ ಸುಲಭದ ಮಾತಾಗಿರಲಿಲ್ಲ. ಇದೀಗ KTM ತನ್ನ 390 ಅಡ್ವೆಂಚರ್ ಬೈಕ್ ಖರೀದಿಸುವು ಗ್ರಾಹಕರಿಗೆ ಕಡಿಮೆ ಬಡ್ಡಿ, ಶೇಕಡಾ 95 ರಷ್ಟು ಆನ್ ರೋಡ್ ಫಂಡ್ ಸೇರಿದಂತೆ ಹಲವು ಆಫರ್ ಘೋಷಿಸಿದೆ. 

ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!

ನೂತನ ಆಫರ್‌ನಡಿ KTM 390 ಅಡ್ವೆಂಟರ್ ಬೈಕ್ ಪ್ರತಿ ತಿಂಗಳ ಕಂತು(EMI)6,999 ರೂಪಾಯಿ ಮಾತ್ರ. ಕಡಿಮೆ ದಾಖಲೆ ಪತ್ರಗಳ ಮೂಲಕ ಸುಲಭವಾಗಿ ಸಾಲ ಸೌಲಭ್ಯವೂ ಸಿಗಲಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ. 

BS6 ಕೆಟಿಎಂ 250 ಡ್ಯೂಕ್ ಬೈಕ್ ಬಿಡುಗಡೆ; ಪ್ರಮುಖ 5 ಬದಲಾವಣೆ!

KTM 390 ಅಡ್ವೆಂಚರ್ ಬೈಕ್ ಬೆಲೆ 2.99 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). 373cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,  44PS ಪವರ್ ಹಾಗೂ  37Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ABS ಬ್ರೇಕ್ ತಂತ್ರಜ್ಞಾನ ಹೊಂದಿದೆ.

KTM 390 ಅಡ್ವೆಂಚರ್ ಬೈಕ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹಾಗೂ ಹೀರೋ ಎಕ್ಸ್ ಪಲ್ಸ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.