ನವದೆಹಲಿ(ಜ.22): ಫೆಬ್ರವರಿ ಮೊದಲ ವಾರದಲ್ಲಿ ಭಾರತದ ಅತ್ಯಂದ ದೊಡ್ಡ ಅಟೋ ಎಕ್ಸ್ಪೋ ಮೋಟಾರು ಶೋ ನಡೆಯಲಿದೆ. ಗ್ರೇಟರ್ ನೋಯ್ದಾದಲ್ಲಿ ನಡೆಯಲಿರುವ ಈ ಮೋಟಾರು ಶೋನಲ್ಲಿ ಮಾರುತಿ ಸುಜುಕಿ ಹೊಸ SUV ಕಾರು ಬಿಡುಗಡೆ ಮಾಡುತ್ತಿದೆ.  ಮಾರುತಿ ಸುಜುಕಿ ನೂತನ ಫ್ಯೂಚರೋ ಇ ಕಾರು ಅನಾವರಣಕ್ಕೆ ಸಜ್ಜಾಗಿದೆ.

ಇದನ್ನೂ ಓದಿ: 7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

ಫೆಬ್ರವರಿ 7 ರಂದು ಮಾರುತಿ ಸುಜುಕಿ ಪ್ಯೂಚರೋ ಇ SUV ಕಾರು ಪರಿಚಯಿಸಲಿದೆ. ಇದಕ್ಕೂ ಮುನ್ನ ಕಾರಿನ ಟೀಸರ್ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಮೊದಲ ನೋಟದಲ್ಲಿ ಫ್ಯುಚರೋ ಇ ಕಾರೂ ಗಮನ ಸೆಳೆಯುತ್ತಿದೆ. ಅತ್ಯಂತ ಆಕರ್ಷಕ ಲುಕ್ ಈ ಕಾರಿನ ವಿಶೇಷತೆಗಳಲ್ಲೊಂದು.

ಇದನ್ನೂ ಓದಿ: ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!

ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಆಕರ್ಷಕ ಡೈಸನ್ ಹೊಂದಿದೆ. ಇದು ಮುಂದಿನ ಪೀಳಿಗೆಯ ಡಿಸೈನ್. ಭಾರತದ ಯುವ ಜನಾಂಗದ ಕಾರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಿನ ಪ್ರತಿಯೊಂದು ವಿಭಾದಗ ಹಂತವನ್ನು ಅಷ್ಟೇ ಕಾಳಜಿ ವಹಿಸಿ ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ ಭಾರತದಲ್ಲಿ ನೂತನ SUV ಕಾರು ಹೊಸ ಸಂಚನ ಸೃಷ್ಟಿಸಲಿದೆ ಎಂದು ಮಾರುತಿ ಸುಜುಕಿ ಕಾರ್ಯನಿರ್ವಹಣ ನಿರ್ದೇಶಕ ಸಿವಿ ರಾಮನ್ ಹೇಳಿದ್ದಾರೆ. 

ಇದನ್ನೂ ಓದಿ: ಮಾರುತಿ ಸೆಲೆರಿಯೋ BS6 ಕಾರು ಬಿಡುಗಡೆ; ಬೆಲೆ ಬದಲಾಗಿದೆ!

ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಸೇರಿದಂತೆ ಕಾಂಪಾಕ್ಟ್ SUV ಕಾರುಗಳಿಗೆ ಪೈಪೋಟಿಯಾಗಿ ಮಾರುತಿ ಫ್ಯುಚರೋ ಇ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರು 1.5 ಲೀಟರ್, DDiS, BS6 ಎಂಜಿನ್ ಹೊಂದಿದೆ. ಈ ಕಾರಿನ ಬೆಲೆ ಬಹಿರಂಗವಾಗಿಲ್ಲ.