ಇಲ್ಲಾ,ಇಲ್ಲಾ, ಇಲ್ಲಾ...ನಾವ್ ಆಂಧ್ರ ಬಿಟ್ಟು ಹೋಗಲ್ಲ; ಕಿಯಾ ಸ್ಪಷ್ಟನೆ!

ಆಂಧ್ರ ಪ್ರದೇಶ ಸರ್ಕಾರದ ಹೊಸ ನೀತಿಗಳಿಂದ ಕಿಯಾ ಮೋಟಾರ್ಸ್ ಕಂಪನಿ ಅನಂತಪುರದ ಘಟಕವನ್ನು ತಮಿಳುನಾಡುಗೆ ಸ್ಥಳಾಂತರಿಸುವ ಕುರಿತು ವರದಿ ಹಬ್ಬಿತ್ತು. ಇದರ ಬೆನ್ಲಲೇ ಕಿಯಾ ಮೋಟಾರ್ ಸ್ಪಷ್ಟನೆ ನೀಡಿದೆ.

Kia motors denied reports of Shifting andhra pradesh car plant

ಅನಂತಪುರಂ(ಫೆ.07): ಕಿಯಾ ಮೋಟಾರ್ಸ್ ಭಾರತದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಯಶಸ್ಸು ಸಾಧಿಸಿದೆ. ಸೆಲ್ಟೋಸ್ ಕಾರಿನ ಬಳಿಕ ಇದೀಗ ಕಿಯಾ ಕಾರ್ನಿವಲ್ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ಸೊನೆಟ್ ಕಾರು ಅನಾವರಣ ಮಾಡಿದೆ. ಇದರ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರದ ಹೊಸ ನೀತಿ ಕಿಯಾಗೆ ಸಂಕಷ್ಟ ತರುತ್ತಿದೆ. ಹೀಗಾಗಿ ಅನಂತಪುರ ಕಾರು ಘಟಕ ಸ್ಥಳಾಂತರಿಸುವ ಕುರಿತು ಕಿಯಾ ಚಿಂತನೆ ನಡೆಸಿದೆ ಎಂದು ರಾಯ್‌ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ: ಯಶಸ್ಸಿನ ಬೆನ್ನಲ್ಲೇ ಕಿಯಾಗೆ ಹೊಡೆತ, ರಾಜಕೀಯದಾಟಕ್ಕೆ 7ಸಾವಿರ ಕೋಟಿ ವ್ಯರ್ಥ!.

ಸ್ಥಳೀಯರಿಗೆ ಶೇಕಡಾ 75 ರಷ್ಟು ಉದ್ಯೋಗ ಸೇರಿದಂತೆ ಹಲವು ನೀತಿಗಳನ್ನು ಜಗನ್ ಮೋಹನ್ ರೆಡ್ಡಿ ಜಾರಿಗೆ ತಂದಿದೆ. ಹೀಗಾಗಿ ಕಿಯಾ ಮೋಟಾರ್ಸ್ ಆಂಧ್ರಪದೇಶದಿಂದ ತಮಿಳುನಾಡಿಗೆ ಸ್ಥಳಾಂತರಗೊಳ್ಳವು ಸಾಧ್ಯತೆ ಇದೆ ಎಂದು ವರದಿ ಹೇಳಿತ್ತು. ಈ ವರದಿ ಬೆನ್ನಲ್ಲೇ ಕಿಯಾ ಮೋಟಾರ್ಸ್ ಸ್ಪಷ್ಟನೆ ನೀಡಿದೆ. ಆಂಧ್ರ ಪ್ರದೇಶದಿಂದ ಸ್ಥಳಾಂತರವಾಗುತ್ತಿಲ್ಲ ಎಂದಿದೆ.

Kia motors denied reports of Shifting andhra pradesh car plant

ಇದನ್ನೂ ಓದಿ: ಇನೋವಾ ಕಾರಿಗೆ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಲಾಂಚ್!

ಆಂಧ್ರ ಪ್ರದೇಶದ ಅನಂತಪುರದಲ್ಲಿ ಕಿಯಾ ಮೋಟಾರ್ಸ್ ಬರೋಬ್ಬರಿ 7,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. ಭಾರತದಲ್ಲಿರುವ ಕಿಯಾ ಸಂಸ್ಥೆಯ ಏಕೈಕ ಹಾಗೂ ಸುಸಜ್ಜಿತ ಕಾರು ಘಟಕ ಇದಾಗಿದ್ದು, ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ ಎಂದಿದೆ.

ಇದನ್ನೂ ಓದಿ: ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!

ಆಂಧ್ರಪ್ರದೇಶ ಸರ್ಕಾರದಿಂದ ಕಿಯಾ ಮೋಟಾರ್ಸ್‌ಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಜಗನ್ ಸರ್ಕಾರದಿಂದ ಬೆಂಬಲ ಸಿಗುತ್ತಿದೆ.  ಅನಂತಪುರ ಘಟಕದಿಂದಲೇ ಭಾರತದಲ್ಲಿ ವಿಶ್ವ ದರ್ಜೆಯ ಕಾರುಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಕಿಯಾ ಹೇಳಿದೆ. 
 

Latest Videos
Follow Us:
Download App:
  • android
  • ios