ಅನಂತಪುರಂ(ಜ.19): ಕಿಯಾ ಮೋಟಾರ್ಸ್ ಇಂಡಿಯಾ ಭಾರತದಲ್ಲಿ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಕಿಯಾ ಸೆಲ್ಟೋಸ್ ಕಾರು SUV ಕಾರು ವಿಭಾಗದಲ್ಲಿ ಹೊಸ ದಾಖಲೆ ಬರೆದಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದ ಕಿಯಾ ಸೆಲ್ಟೋಸ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಇದೀಗ ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಟೀಸರ್ ರಿಲೀಸ್!.

ಟೊಯೋಟಾ ಇನೋವ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಕಾರ್ನಿವಲ್ ಕಾರು ಬಿಡುಗಡೆಯಾಗುತ್ತಿದೆ. ಫೆಬ್ರವರಿ 5 ರಂದು ಗ್ರೇಟರ್ ನೋಯ್ಡಾ ಅಟೋ ಎಕ್ಸೋಪದಲ್ಲಿ ಕಿಯಾ ಕಾರ್ನಿವಲ್ ಕಾರು ಬಿಡುಗಡೆಯಾಗಲಿದೆ.  ನೂತನ ಕಾರಿನ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕಾರಿನ ಬೆಲೆ ಬಹಿರಂಗವಾಗಿದೆ. ಕಿಯಾ ಕಾರಿನ ಬೆಲೆ 27 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲೇ ಶಾಕ್; ಕಿಯಾ ಸೆಲ್ಟೋಸ್ ಕಾರು ಬೆಲೆ ಹೆಚ್ಚಳ!

7 ಸೀಟರ್, 8 ಸೀಟರ್ ಹಾಗೂ 9 ಸೀಟರ್‌ಗಳಲ್ಲಿ ಕಿಯಾ ಕಾರ್ನಿವಲ್ ಕಾರು ಲಭ್ಯವಿದೆ. ಟಾಪ್ ಮಾಡೆಲ್ ಬೆಲೆ 33 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ನೂತನ ಕಾರು  BS 6 ಎಂಜಿನ್ ಹೊಂದಿದ್ದು, 2.2 ಲೀಟರ್, 4 ಸಿಲಿಂಡರ್ ಎಂಜಿನ್,  200bhp ಪವರ್ ಹಾಗೂ  8 ಸ್ಪೀಡ್ ಅಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

 

ಸುರಕ್ಷತೆಗೆ ಕಿಯಾ ಹೆಚ್ಚಿನ ಗಮನ ನೀಡಿದೆ. 6 ಏರ್‌ಬ್ಯಾಗ್, ABS, EBD, ESC, ಟೈಯರ್ ಪ್ರೆಶರ್ ಮಾನಿಟರ್, ರೇರ್ ಪಾರ್ಕಿಂಗ್ ಕ್ಯಾಮರ, ಫ್ರಂಟ್ ಹಾಗೂ ರೇರ್ ಸೆನ್ಸಾರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಆಟೋ ಡಿಫಾಗರ್ ಹೊಂದಿದೆ.