ಬೆಂಗಳೂರು(ಡಿ.26):  ದೇಶದಲ್ಲಿ ತೊಂಬತ್ತರ ದಶಕ ಬಹಳ ಮುಖ್ಯವಾದದ್ದು. ಆಗ ತಾನೆ ತಂತ್ರಜ್ಞಾನ ವಿವಿಧ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಾ ಸಾಗಿತ್ತು. ಜಾಗತೀಕರಣದ ಫಲವಾಗಿ ವಿದೇಶಿ ತಂತ್ರಜ್ಞಾನಗಳು ದೇಶದ ಒಳ ಬಂದು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದವು. ಅದರಲ್ಲಿ ಕೃಷಿ ಕ್ಷೇತ್ರ ಪ್ರಮುಖವಾದದ್ದು.

ಅದು 1998, ಅಮೆರಿಕಾ ಮೂಲದ, ಸುಮಾರು 182 ವರ್ಷಗಳಷ್ಟುಹಳೆಯದಾದ ಬಹುರಾಷ್ಟ್ರೀಯ ಕಂಪನಿ ‘ಜಾನ್‌ ಡೀರ್‌’ ನಮ್ಮ ದೇಶಕ್ಕೆ (ಪುಣೆ) ಎಂಟ್ರಿ ನೀಡಿತು. ಸುಧಾರಿತ ತಂತ್ರಜ್ಞಾನದ ಮೂಲಕ ಟ್ರ್ಯಾಕ್ಟರ್‌ಗಳನ್ನು ತಯಾರು ಮಾಡಿ ರೈತರ ಹೊಲ ಗದ್ದೆಗಳಲ್ಲಿ ಹಸಿರು ನಳನಳಿಸುವಂತೆ ಮಾಡಿ ಬದುಕು ಹಸನು ಮಾಡುವ ಕಾರ್ಯವನ್ನು ಮಾಡುತ್ತಾ ಬಂದಿತು. ಈಗ 2018ಕ್ಕೆ ಜಾನ್‌ ಡೀರ್‌ ದೇಶಕ್ಕೆ ಕಾಲಿಟ್ಟು ಭರ್ತಿ ಇಪ್ಪತ್ತು ವರ್ಷಗಳು ಸಂದಿವೆ. ಇಷ್ಟುಕಡಿಮೆ ಅವಧಿಯಲ್ಲಿಯೇ ಲಕ್ಷಗಳಷ್ಟುಟ್ರ್ಯಾಕ್ಟರ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿರುವ ಹೆಗ್ಗಳಿಕೆ ಇದರದ್ದು.

ಇದನ್ನೂ ಓದಿ: ಜಾವಾ ಮುಂಗಡ ಬುಕ್ಕಿಂಗ್‌, ಟೆಸ್ಟ್‌ ರೈಡ್ ಶುರು-ಇನ್ನೇಕೆ ತಡ!

ಟ್ರ್ಯಾಕ್ಟರ್‌ ಉದ್ಯಮದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಜಾನ್‌ ಡೀರ್‌ ಮೊಟ್ಟಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನ, ಜಿಪಿಎಸ್‌ ಆಧಾರಿತ ಚಾಲನೆ, ಆ್ಯಪ್‌ ಮೂಲಕ ನಿರ್ವಹಣೆ ಮಾಡಬಹುದಾದ ಟ್ರ್ಯಾಕ್ಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ರೈತರ ಉತ್ಪಾನದನಾ ವೆಚ್ಚವನ್ನು ಗಣನೀಯವಾಗಿ ಇಳಿಕೆಯಾಗುವಂತೆ ಮಾಡಿತ್ತು. ಈಗ ಮುಂದಿನ ದಿನಗಳಲ್ಲಿ ಮತ್ತಷ್ಟುಸುಧಾರಿತ ತಂತ್ರಜ್ಞಾನದ ಜೊತೆಗೆ ದೇಶದ ಮೂಲೆ ಮೂಲೆಗೂ ತಲುಪುವ ಉದ್ದೇಶ ಹೊಂದಿದೆ ಜಾನ್‌ ಡೀರ್‌.

ಇಪ್ಪತ್ತು ವರ್ಷದ ಹಾದಿ:

ಜಾನ್‌ ಡೀರ್‌ ಎನ್ನುವರಿಂದ ಸ್ಥಾಪಿತವಾದ ಈ ಕಂಪನಿ ಭಾರತಕ್ಕೆ ಕಾಲಿಟ್ಟಿದ್ದು 1998ರಲ್ಲಿ. ಮಹಾರಾಷ್ಟ್ರದ ಪುಣೆಯಲ್ಲಿ ಉತ್ಪಾದನಾ ಕೇಂದ್ರ ಆರಂಭಿಸಿ 28 ಎಚ್‌ಪಿ ಟ್ರ್ಯಾಕ್ಟರ್‌ ಉತ್ಪಾದನೆ ಮಾಡಿದ್ದ ಕಂಪನಿ ಇಂದು 120 ಎಚ್‌ಪಿ ವರೆಗೂ ತನ್ನ ಸಾಮರ್ಥ್ಯ ವೃದ್ಧಿಸಿಕೊಂಡಿದೆ. ಇದರೊಂದಿಗೆ ಸೂಕ್ತ ಫೈನಾನ್ಸ್‌, ಎಲ್ಲಾ ಕಡೆಯಲ್ಲೂ ಸುಲಭವಾಗಿ ಲಭ್ಯವಾಗುವಂತಹ ಸೇವಾಕೇಂದ್ರಗಳು, ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ಗಳನ್ನು ಸ್ಥಾಪಿಸಿಕೊಂಡು ಒಂದು ಲಕ್ಷ ಟ್ರ್ಯಾಕ್ಟರ್‌ಗಳನ್ನು ಪುಣೆಯ ಕೇಂದ್ರದಲ್ಲಿಯೇ ಉತ್ಪಾದನೆ ಮಾಡಿದೆ. ಇಲ್ಲಿಂದ ಸ್ಥಳೀಯ ಮಾರುಕಟ್ಟೆಯ ಜೊತೆಗೆ ವಿದೇಶಗಳಿಗೂ ಟ್ರ್ಯಾಕ್ಟರ್‌ ರಫ್ತು ಮಾಡುತ್ತಿರುವುದು ವಿಶೇಷ.

ಇದನ್ನೂ ಓದಿ: ರಸ್ತೆ ನಿಯಮ ಪಾಲನೆಯಲ್ಲಿ ಭಾರತೀಯರು ಲಾಸ್ಟ್- ಸಮೀಕ್ಷೆ ಬಹಿರಂಗ!

ಹೊಸ ಟ್ರ್ಯಾಕ್ಟರ್‌ ಬಿಡುಗಡೆ

ಒಂದು ಉತ್ಪನ್ನದಿಂದ ಮತ್ತೊಂದು ಉತ್ಪನ್ನಕ್ಕೆ ಉನ್ನತ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾರುಕಟ್ಟೆಗೆ ಬರುವುದು ಜಾನ್‌ ಡೀರ್‌ ವಿಶೇಷ. ಇನ್ನು ಇಪ್ಪತ್ತನೇ ವರ್ಷದ ಹೊಸ್ತಿಲಲ್ಲಿ ಇರುವಾಗ ಕಡಿಮೆ ಬೆಲೆಯಲ್ಲಿ ಹೆಚ್ಚು ಶಕ್ತಿಶಾಲಿ ಟ್ರ್ಯಾಕ್ಟರ್‌ ನೀಡಬೇಕು ಎನ್ನುವ ಉದ್ದೇಶದಿಂದ 3028ಇಎನ್‌ ಮಾಡೆಲ್‌ಅನ್ನು ಪರಿಚಯಿಸಿದೆ. ಆದರೆ ಇದರ ಗುಣ ಲಕ್ಷಣಗಳು, ಬೆಲೆ ಮೊದಲಾದ ವಿವರಗಳನ್ನು ತಿಳಿಯಬೇಕಾದರೆ ಮುಂದಿನ ಮುಂಗಾರಿನವರೆಗೂ ಕಾಯಲೇಬೇಕು. ಏಕೆಂದರೆ ಸೂಕ್ತ ತಯಾರಿ ಮಾಡಿಕೊಂಡು ಮುಂಗಾರು ಶುರುವಾಗುತ್ತಿದ್ದಂತೆಯೇ ಪ್ರದೇಶವಾರು ಮಾರುಕಟ್ಟೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ ಜಾನ್‌ ಡೀರ್‌.

ಇದನ್ನೂ ಓದಿ: ಸ್ಟಾರ್ ನಟನಿಗೆ ಎಚ್ಚರಿಕೆ ನೀಡಿ ಪೇಚಿಗೆ ಸಿಲುಕಿದ ಪೊಲೀಸ್!

ಎಲ್ಲಾ ಟ್ರ್ಯಾಕ್ಟರ್‌ಗಳ ಇಂಜಿನ್‌ಗೆ ಐದು ವರ್ಷಗಳ ವಾರೆಂಟಿ ನೀಡುವುದು ಸಾಮಾನ್ಯ. ಆದರೆ ಮೊದಲ ಬಾರಿಗೆ ಜಾನ್‌ ಡೀರ್‌ ಇಂಜಿನ್‌ ಜೊತೆಗೆ ಕ್ಲಚ್‌ಗೂ ವಾರಂಟಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಜಾನ್‌ ಡೀರ್‌ ಭಾರತದ ಮ್ಯಾನೇಜಿಂಗ್‌ ಡೈರೆಕ್ಟರ್‌ ಸತೀಶ್‌ ನಾಡಿಗ್‌ ‘ನಾವು ದೇಶದ ಕೃಷಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದೇವೆ. ಇಪ್ಪತ್ತು ವರ್ಷಗಳ ಹಾದಿಯನ್ನು ಯಶಸ್ವಿಯಾಗಿ ಕಳೆದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟುಉತ್ಸಾಹದಿಂದ ಕೆಲಸ ಮಾಡಿ ನಮ್ಮ ಕಾರ್ಯಕ್ಷೇತ್ರವನ್ನು ವೃದ್ಧಿಸಿಕೊಳ್ಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.