Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!

*ಜಪಾನ್‌ನ್ ಸ್ಟಾರ್ಟಪ್‌ ಕಂಪನಿ ಅಭಿವೃದ್ಧಿಪಡಿಸಿರುವ ಕಾರು
*ಸುಮಾರು 48 kmph ವೇಗ : ಗಾಳಿಯಲ್ಲಿ ಹತ್ತು ನಿಮಿಷ ಸಂಚಾರ
*ಜಪಾನ್‌ ಸರ್ಕಾರದಿಂದ Flying Carಗಳಿಗೆ ಗ್ರೀನ್ ಸಿಗ್ನಲ್ 

Japan Approves Safety Certificate For eVTOL Flying Cars developed by SkyDrive

ಜಪಾನ್ (ನ.6 ) : ಸಹಜವಾಗಿ ಸಿನಿಮಾಗಳಲ್ಲಿ ನಾವು ಹಾರುವ ಕಾರುಗಳನ್ನು (Flying Car) ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ಹಾರುವ ಕಾರು ಬಳಕೆಗೆ ಲಭ್ಯವಿದೆಯೇ ಎಂದ ಕೂತೂಹಲ ನಮ್ಮ ನಿಮ್ಮೆಲ್ಲರಿಗಿರಬಹದು. ಸಿನಿಮಾಗಳಲ್ಲಿ ಹಾರುವ ಕಾರಿನ ದೃಶ್ಯ ನೋಡಿದಾಗ ಇಂಥಹದೊಂದು ಆವಿಷ್ಕಾರ ಸಾಧ್ಯವೇ, ಒಂದು ವೇಳೆ ಹಾರುವ ಕಾರನ್ನು ಅಭಿವೃದ್ಧಿಪಡಿಸಿದರೂ ಸರ್ಕಾರ ಅದಕ್ಕೆ ಮಾನ್ಯತೆ ನೀಡಬಹುದೇ ಎಂಬ ಅನುಮಾನ ಹುಟ್ಟುವುದು ಸಹಜ. ಆದರೆ ಜಪಾನಿನ  (Japan) ಕಂಪನಿಯೊಂದು ಇತ್ತಿಚೇಗೆ ಹಾರುವ ಕಾರುಗಳನ್ನು ಅಭಿವೃದ್ದಿಪಡಿಸಿದ್ದಲ್ಲದೇ ಜಪಾನ್‌ ಸರ್ಕಾರದಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಟೋಕಿಯೋ (Tokyo) ಮೂಲದ SkyDrive ಎಂಬ ಸ್ಟಾರ್ಟ್‌ಅಪ್‌ನ (Start Up) eVTOL (ಎಲೆಕ್ಟ್ರಿಕ್ ವೆಹಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಏರ್‌ಕ್ರಾಫ್ಟ್) ಫ್ಲೈಯಿಂಗ್ ಕಾರು ಇತ್ತೀಚೆಗೆ ಸುರಕ್ಷತಾ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಈ ಮೂಲಕ ಹಾರುವ ಕಾರುಗಳಿಗೆ ಜಪಾನ್‌ನಲ್ಲಿ ಗ್ರೀನ್ ಸಿಗ್ನಲ್‌ ನೀಡಿದಂತಾಗಿದೆ.

ವರದಿಗಳ ಪ್ರಕಾರ, ಕಂಪನಿಯು ಜಪಾನ್‌ನ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯದಿಂದ (MLIT) ಸುರಕ್ಷತಾ ಪ್ರಮಾಣಪತ್ರವನ್ನು ಸ್ವೀಕರಿಸಿದೆ. ಸ್ಟಾರ್ಟಪ್  ತನ್ನ ಹಾರುವ ಕಾರು ಮಾದರಿಯನ್ನು 2018 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತ್ತು ಹಾಗೂ ಅದರ ಮೊದಲ ಯಶಸ್ವಿ ಪ್ರಾಯೋಗಿಕ ಹಾರಾಟ ಪರೀಕ್ಷೆಯನ್ನು 2020 ರಲ್ಲಿ ನಡೆಸಿತ್ತು."ಹಾರುವ ಕಾರಿನ ಸಾಮರ್ಥ್ಯ ಪರೀಕ್ಷೆಗಳು ಮತ್ತು ಫ್ಲೈಟ್ ಪರೀಕ್ಷೆಗಳನ್ನು ನಡೆಸಿದ ನಂತರವೇ ಪ್ರಮಾಣೀಕರಣವನ್ನು ನೀಡಲಾಗುತ್ತದೆ" ಎಂದು SkyDrive ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ. ಜತೆಗೆ ಜಪಾನ್‌ ಸರ್ಕಾರ ಹಾರುವ ಕಾರಿಗೆ ಪ್ರಮಾಣಪತ್ರ ನೀಡಿರುವುದು ಇದೇ ಮೊದಲು ಎಂದು ಕಂಪನಿ ತಿಳಿಸಿದೆ.

ಹಾರುವ ಕಾರಿನ ಕನಸು ನನಸಾಗುವತ್ತ: 2 ನಗರಗಳ ನಡುವೆ ಹಾರಾಡಿತು ಕಾರು!

ಹಾರುವ ಕಾರನ್ನು ಕಂಪನಿ - SD-03 ಎಂದು ಹೆಸರಿಸಿದೆ.  ಎಂಟು ಪ್ರೊಪೆಲ್ಲರ್‌ಗಳನ್ನು ಹೊಂದಿರುವ ಈ ಕಾರು ಸುಮಾರು 48 kmph ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯದ ಮಟ್ಟಿಗೆ ಇದು 10 ನಿಮಿಷಗಳ ಹಾರಾಟದ ಸಮಯವನ್ನು ಹೊಂದಿದೆ, ಆದರೆ ಇದು ಮತ್ತಷ್ಟು ಅಭಿವೃದ್ಧಿಗೊಳಿಸಿದರೆ ಈ ಸಮಯ ಹೆಚ್ಚಾಗುವ ಸಾದ್ಯತೆ ಇದೆ ಎಂದು ಕಂಪನಿ ತಿಳಿಸಿದೆ. ಇದು 30 ಕಿಲೋಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಸಹ ಹೊಂದಿದೆ.

SD-03 ತೆರೆದ ಕ್ಯಾಬಿನ್ ಅನ್ನು ಒಳಗೊಂಡಿದ್ದು ವಾಹನವನ್ನು ಚಾಲನೆ ಮಾಡುವ/ಹಾರಿಸುವ ಒಬ್ಬ ವ್ಯಕ್ತಿಗೆ ಮಾತ್ರ ಸ್ಥಳಾವಕಾಶವಿದೆ. SkyDrive 2025 ರ ವೇಳೆಗೆ ಜಪಾನ್‌ನ ಒಸಾಕಾ ಬೇ ಪ್ರದೇಶದಲ್ಲಿ ಹಾರುವ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆಯನ್ನು ಹೊಂದಿದೆ. ಪರ್ವತ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಇದು ಉಪಯೋಗವಾಗಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲೂ ಹಾರುವ ಕಾರ್‌ ಅಭಿವೃದ್ಧಿ!

ಭಾರತದಲ್ಲಿ ಕೂಡ ಚೆನ್ನೈ ಮೂಲದ ಸ್ಟಾರ್ಟ್ಅಪ್  ಕಂಪನಿಯೊಂದು ಹೈಬ್ರಿಡ್ ಹಾರುವ ಕಾರನ್ನು (Hybrid flying car) ಅಭಿವೃದ್ಧಿಪಡಿಸಿದೆ. ವಿನತಾ ಏರೋಮೊಬಿಲಿಟಿ (Vinata Aeromobility) ತನ್ನ ಹೈಬ್ರಿಡ್ ಹಾರುವ ಕಾರನ್ನು ಅಕ್ಟೋಬರ್ 5 ರಂದು ಲಂಡನ್‌ನಲ್ಲಿ ಎಕ್ಸೆಲ್ ( Excel) ಎಂಬ ಅತ್ಯಂತ ಜನಪ್ರಿಯ ವಾಯುಯಾನ ಪ್ರದರ್ಶನದಲ್ಲಿ ಜಗತ್ತಿಗೆ ಅನಾವರಣಗೊಳಿಸಿತು.

18 ನಿಮಿಷದಲ್ಲಿ ಶೇ.50 ರಷ್ಟು ಚಾರ್ಚ್; ಓಲಾ ಸ್ಕೂಟರ್ ಮೊದಲ ಹೈಪರ್ ಚಾರ್ಚರ್ ಲಾಂಚ್!

"ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಪರಿಕಲ್ಪನೆಯ ಮಾದರಿಯನ್ನು ವಿನತಾ ಏರೋಮೊಬಿಲಿಟಿಯ (Vinata Aeromobility) ಯುವ ತಂಡವು ಪರಿಚಯಿಸಿದ್ದು ಸಂತೋಷವಾಗಿದೆ. ಈ ಯೋಜನೆಯೂ ಟೇಕ್ ಆಫ್ ಆದ ಬಳಿಕ, ಹಾರುವ ಕಾರುಗಳು ಜನರು ಮತ್ತು ಸರಕುಗಳನ್ನು ಸಾಗಿಸಲು ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ." ಎಂದು ನಾಗರಿಕ ವಿಮಾನಯಾನ ಸಚಿವ, ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಹೇಳಿದ್ದಾರೆ.

Latest Videos
Follow Us:
Download App:
  • android
  • ios