ನವದೆಹಲಿ(ಫೆ.07): 2020ರಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಆದರೆ ಹಲವು ಕಂಪನಿಗಳು ಇನ್ನೂ ನಷ್ಟದಲ್ಲಿದೆ. ವಾಹನ ಮಾರಾಟ ಕುಸಿತ ಕಾಣುತ್ತಲೇ ಇದೆ. ಇದರ ನಡುವೆ ಜನವರಿಯಲ್ಲಿ ಮಾರಾಟವಾದ ವಾಹನಗಳ ವರದಿ ಬಿಡುಗಡೆಯಾಗಿದೆ. ಮೊದಲ ಸ್ಥಾನವನ್ನು ಮಾರುತಿ ಸಿಫ್ಟ್ ಡಿಸೈರ್ ಅಲಂಕರಿಸಿದೆ.

ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಅನಾವರಣ; 32 ಕಿ.ಮೀ ಮೈಲೇಜ್ ದಾಖಲೆ!

ಜನವರಿಲ್ಲಿ ಮಾರಾಟವಾದ ಟಾಪ್ 5  ಸ್ಥಾನಗಳನ್ನು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳೇ ಪಡೆದುಕೊಂಡಿದೆ. ಇದರ ನಡುವೆ ಕಿಯಾ ಸೆಲ್ಟೋಸ್ ಕೂಡ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ.  ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ ಸ್ಫಿಫ್ಟ್ ಡಿಸೈರ್ 22,406 ಕಾರುಗಳು ಮಾರಾಟವಾಗಿದೆ. 

ಇದನ್ನೂ ಓದಿ: ಅತ್ಯುತ್ತಮ ವಿನ್ಯಾಸದ ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಅನಾವರಣ!

ಡಿಸೈರ್ ನಂತರದ ಸ್ಥಾನಗಳನ್ನ ಮಾರುತಿ ಬಲೆನೋ, ಮಾರುತಿ ಸ್ವಿಫ್ಟ್, ಮಾರುತಿ ಅಲ್ಟೋ, ಮಾರುತಿ ವ್ಯಾಗನ್ಆರ್ ಕಾರು ಪಡೆದುಕೊಂಡಿದೆ. ಹ್ಯುಂಡೈ, ಟಾಟಾ, ಮಹೀಂದ್ರ ಕಾರುಗಳನ್ನು ಹಿಂದಿಕ್ಕಿರುವ ಕಿಯಾ ಸೆಲ್ಟೋಸ್ 6ನೇ ಸ್ಥಾನ ಪಡೆದುಕೊಂಡಿದೆ. 

ಜನವರಿಯಲ್ಲಿ ಮಾರಾಟವಾದ ಟಾಪ್ 10 ಕಾರು ಪಟ್ಟಿ:
ಮಾರುತಿ ಡಿಸೈರ್ (22,406)
ಮಾರುತಿ ಬಲೆನೋ (20,485)
 ಮಾರುತಿ ಸ್ವಿಫ್ಟ್ (19,981)
ಮಾರುತಿ ಅಲ್ಟೋ (18,914)
ಮಾರುತಿ ವ್ಯಾಗನ್ಆರ್ (15,232)
ಕಿಯಾ ಸೆಲ್ಟೋಸ್(15,000)
ಮಾರುತಿ ಇಕೋ (12,324)
ಮಾರುತಿ ಬ್ರೆಜ್ಜಾ (10,134)
ಹ್ಯುಂಡೈ ಗ್ರ್ಯಾಂಜ್ ಐ10 (8,774)
ಹ್ಯುಂಡೈ ಐ20(8,137)