Asianet Suvarna News Asianet Suvarna News

ರಕ್ಷಾಬಂಧನ: ಸಹೋದರಿಯೊಂದಿಗಿನ ಬಾಲ್ಯದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹಿಂದ್ರಾ ಕೂಡ ತಮ್ಮ ಸಹೋದರಿಯೊಂದಿಗೆ ರಕ್ಷಾ ಬಂಧನ ಹಬ್ಬ ಅಚರಿಸುತ್ತಿರುವ ಬಹಳ ಹಳೆಯ ಫೋಟೋವೊಂದನ್ನು ಶೇರ್ ಮಾಡಿದ್ದು, ನೆಟ್ಟಿಗರು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿ ರಕ್ಷಾ ಬಂಧನದ ಶುಭ ಹಾರೈಸಿದ್ದಾರೆ. 

Industrialist Anand Mahindra shares throwback photos of Raksha Bandhan akb
Author
Bangalore, First Published Aug 12, 2022, 3:07 PM IST

ನಿನ್ನೆಯಷ್ಟೇ ಸಹೋದರ ಸಹೋದರಿಯರ ಸಂಬಂಧವನ್ನು ಸಂಭ್ರಮಿಸುವ ಸಂಭ್ರಮದ ರಕ್ಷಾ ಬಂಧನ ಹಬ್ಬ ಮುಗಿದಿದೆ. ದೇಶಾದ್ಯಂತ ಸಹೋದರ ಸಹೋದರಿಯರು ಸಂಭ್ರಮದಿಂದ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಹಲವು ಸಿನಿಮಾ ರಂಗದ ಗಣ್ಯರು ತಮ್ಮ ಸಹೋದರ ಸಹೋದರಿಯರೊಂದಿಗೆ ಹಬ್ಬ ಆಚರಿಸಿದ್ದಲ್ಲದೇ ತಮ್ಮ ಬಾಲ್ಯದ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಗತದ ನೆನಪಿಗೆ ಜಾರಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಾರೆಯರ ಹಳೆ ಫೋಟೋಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಅದೇ ರೀತಿ ಉದ್ಯಮಿ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹಿಂದ್ರಾ ಕೂಡ ತಮ್ಮ ಸಹೋದರಿಯೊಂದಿಗೆ ರಕ್ಷಾ ಬಂಧನ ಹಬ್ಬ ಅಚರಿಸುತ್ತಿರುವ ಬಹಳ ಹಳೆಯ ಫೋಟೋವೊಂದನ್ನು ಶೇರ್ ಮಾಡಿದ್ದು, ನೆಟ್ಟಿಗರು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿ ರಕ್ಷಾ ಬಂಧನದ ಶುಭ ಹಾರೈಸಿದ್ದಾರೆ. 

ಈ ಫೋಟೋದಲ್ಲಿ ಇವರ ಹಿರಿಯ ಸಹೋದರಿ ರಾಧಿಕಾ ಹಾಗೂ ತಾಯಿ ಇಂದಿರಾ ಜೊತೆಗಿದ್ದು, ಅಕ್ಕ ರಾಧಿಕಾ ಇವರ ಕೈಗಳಿಗೆ ರಕ್ಷೆಯನ್ನು ಕಟ್ಟುತ್ತಿದ್ದಾರೆ. ಈ ಫೋಟೋವನ್ನು ಹಂಚಿಕೊಂಡಿರು ಮಹೀಂದ್ರಾ ದೆಹಲಿಯಲ್ಲಿರುವ ತನ್ನ ಸಹೋದರಿಯ ಹಾಗೂ ತಾಯಿಯನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಇದೇ ವೇಳೆ ತಮ್ಮ ಕಿರಿಯ ಸಹೋದರಿ ಅನುಜಾ ಅವರನ್ನು ಕೂಡ ನೆನೆದ ಆನಂದ್ ಮಹೀಂದ್ರಾ, ತನ್ನ ಕಿರಿಯ ಸಹೋದರಿ ಅನುಜಾ ಕರ್ನಾಟಕದ ಕೊಡಗಿನಲ್ಲಿದ್ದು, ಆಕೆ ಕಳುಹಿಸಿದ ರಾಕಿ ಈಗಾಗಲೇ ಸರಿಯಾದ ಸಮಯಕ್ಕೆ ನನ್ನನ್ನು ತಲುಪಿದೆ. ಆಕೆಯ ಶುಭ ಹಾರೈಕೆಗಳು ಸದಾ ನನ್ನ ಜೊತೆಗಿರುತ್ತವೆ. ಕೆಲವು ಸಂಪ್ರದಾಯಗಳು ಎಂದಿಗೂ ಸಾಯುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. 

ಇದು ಆರ್ಕೈವ್‌ನಲ್ಲಿದ್ದ ರಕ್ಷಾ ಬಂಧನ ಹಬ್ಬದ  ಫೋಟೋ, ನನ್ನ ತಾಯಿ ಹಾಗೂ ಅಕ್ಕ ರಾಧಿಕಾ ಜೊತೆಗಿರುವ ಫೋಟೋ, ಅವರಿಬ್ಬರು ದೆಹಲಿಯಲ್ಲಿದ್ದು, ನಾನು ಅವರಿದ್ದಲ್ಲಿಗೆ ಶೀಘ್ರದಲ್ಲೇ ಹೋಗುವೆ. ಹಾಗೆಯೇ ನನ್ನ ಕಿರಿಯ ಸಹೋದರಿ ಅನುಜಾ ಕೊಡಗಿನಲ್ಲಿದ್ದು, ಅವಳು ಕಳುಹಿಸಿದ ರಾಕಿ ಈಗಾಗಲೇ ನನ್ನನ್ನು ಬಂದು ತಲುಪಿದೆ ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ. 

ಆರು ಕಿಮೀ ನಡೆದೇ ಹೋಗಿ ಪುಸ್ತಕ ವಿತರಣೆ; ಗ್ರಂಥಪಾಲಕಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ಈ ಫೋಸ್ಟ್‌ನ್ನು 3,500 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಜೊತೆಗೆ ಉದ್ಯಮಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಇದು ನಮ್ಮ ಸಂಪ್ರದಾಯ, ಈ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ತಿಳಿಸಿ ಅವುಗಳನ್ನು ಜೀವಂತವಾಗಿರಿಸುವುದು ನಮ್ಮ ಕರ್ತವ್ಯ. ನೀವು ಕೂಡ ಇದೇ ಭಾಂದವ್ಯ ಹಾಗೂ ಭಾವನೆಗಳನ್ನು ಹೊಂದಿರುವುದು ನೋಡಿ ಖುಷಿ ಆಯ್ತು ಎಂದು ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋದಲ್ಲಿರುವ ಪುಟ್ಟ ಹುಡುಗ ಈಗ ವಾಹನ ಜಗತ್ತನ್ನು ಆಳುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

10 ವರ್ಷಗಳ ಕಠಿಣ ಶ್ರಮದಿಂದ SUV ಖರೀದಿಸಿದ ಯುವಕ, ಆನಂದ್‌ ಮಹೀಂದ್ರಾ ಮೆಚ್ಚುಗೆ!

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಟ್ವಿಟ್ಟರ್‌ನಲ್ಲಿ ಸದಾ ಆಕ್ಟಿವ್, ಸದಾ ಏನಾದರೊಂದು ಸಂದೇಶ ನೀಡುವ, ಅಥವಾ ಕ್ರಿಯೇಟಿವ್ ಎನಿಸಿದ ವಿಡಿಯೋಗಳನ್ನು ಶೇರ್ ಮಾಡುವ ಮಹೀಂದ್ರ ಅವರು ಅಲ್ಲಿ ತಮ್ಮ ಅಭಿಪ್ರಾಯಗಳನ್ನು ಜೊತೆಗೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೇ ಸಂಕಷ್ಟದಲ್ಲಿರುವವರಿಗೆ ನೆರವನ್ನು ನೀಡುತ್ತಾರೆ. 
 

Follow Us:
Download App:
  • android
  • ios