ಬೆಂಗಳೂರು(ಫೆ.03): ಮೋಟರ್‌ಸೈಕಲ್ ಲಾಂಗ್ ರೈಡ್ ಮಾಡುವುದರಲ್ಲಿ ಸಿಗೋ ಆನಂದ ಬೈಕ್ ಪ್ರಿಯರಿಗೆ ಚೆನ್ನಾಗಿ ತಿಳಿದಿದೆ. ಭಾರತದಲ್ಲಿ ಹಲವು ಬ್ರ್ಯಾಂಡ್ ಬೈಕ್‌ಗಳಿವೆ. 20ರ ದಶಕದ ಆರಂಭದಲ್ಲಿ ಭಾರತದಲ್ಲಿದ್ದ ಕೆಲ ಬೈಕ್‌ಗಳನ್ನ ರೈಡ್ ಮಾಡಲೇಬೇಕು. ಈ ಕೂಲ್ ಬೈಕ್‌ಗಳ ರೈಡಿಂಗ್ ಮಜಾ ನೂತನ ಬೈಕ್‌ಗಳಲ್ಲಿ ಸಿಗೋದಿಲ್ಲ. ರೈಡ್ ಮಾಡಲೇಬೇಕಾದ 5 ಕೂಲೆಸ್ಟ್ ರೆಟ್ರೋ ಬೈಕ್ ವಿವರ ಇಲ್ಲಿದೆ.

1 ರಾಯಲ್ ಎನ್‌ಫೀಲ್ಡ್ ಟೌರಸ್


1980ರಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಭಾರತದಲ್ಲಿ ಮೋಡಿ ಮಾಡಿತ್ತು. ಅದರಲ್ಲೂ ಡೀಸೆಲ್ ಎಂಜಿನ್ ರಾಯಲ್ ಎನ್‌ಫೀಲ್ಡ್ ಟೌರಸ್ ಬೈಕ್ ಅನುಭವ ಅತ್ಯದ್ಬುತ.  ಭಾರತದ ರಸ್ತೆಗಳಲ್ಲಿರುವ ಏಕೈಕ ಡೀಸೆಲ್ ಬೈಕ್ ಇದು. ಇದರ ಮೈಲೇಜ್ ಬರೋಬ್ಬರಿ 85kmpl. 325 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಟೌರಸ್ 6.5BHP ಪವರ್ ಹಾಗೂ 15Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

2 ಯಮಹಾ RX100


2 ಸ್ಟ್ರೋಕ್ ಎಂಜಿನ್ ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯ ಬೈಕ್ ಯಮಹಾ RX100. 100 ಸಿಸಿ ಎಂಜಿನ್ ಹೊಂದಿರು ಈ ಬೈಕ್ ಶಬ್ಧಕ್ಕೆ ಮಾರುಹಹೋಗುತ್ತಾರೆ. ಭಾರತದಲ್ಲೂ ಈಗಲೂ ಯಮಹಾ RX100 ಭಾರಿ ಬೇಡಿಕೆ ಇದೆ.

3 ಯಝೆಡಿ ರೋಡ್‌ಕಿಂಗ್


90ರ ದಶಕದಲ್ಲಿ ಮೋಡಿ ಮಾಡಿದ ಜೆಕ್ ಗಣರಾಜ್ಯದ ಯಝೆಡಿ ರೋಡ್ ಕಿಂಗ್ ಬೈಕ್, 2 ಸ್ಟ್ರೋಕ್ ಎಂಜಿನ್. 1978ರಲ್ಲಿ ಬಿಡುಗಡೆಯಾದ ಈ ಬೈಕ್, 250cc ಏರ್‌ಕೂಲ್‌ಡ ಎಂಜಿನ್ ಹೊಂದಿದೆ. ಈ ಬೈಕ್ ರೈಡಿಂಗ್ ಕೂಡ ಹೊಸ ಅನುಭವ ನೀಡಲಿದೆ.

4 ಬಜಾಜ್ ಚೇತಕ್


ಹಮಾರ ಬಜಾಜ್ ಜಾಹೀರಾತು ಮೂಲಕ ಮನೆಮಾತಾದ ಬಜಾಜ್ ಚೇತಕ್ ಸ್ಕೂಟರ್, ಭಾರತದಲ್ಲಿ ಹೊಸ ಸಂಚಲನ ಮೂಡಿಸಿತು. ಈ ಸ್ಕೂಟರ್ ರೈಡಿಂಗ್ ಹೊಸ ಅನುಭವ ನೀಡಲಿದೆ. ಗೇರ್ ಹೊಂದಿರುವ ಈ ಸ್ಕೂಟರ್, ಹಲವು ಚಲನ ಚಿತ್ರಗಳಲ್ಲಿ ಈಗಲೂ ಕಾಣಿಸಿಕೊಳ್ಳುತ್ತೆ.

5 ಹೀರೋ ಪುಚ್


ಹೀರೋ ಪುಚ್ ಬಿಡುಗಡೆ ಭಾರತದಲ್ಲಿ ಸ್ಕೂಟರ್ ಹಾಗೂ ಬೈಕ್ತ ಕ್ಷೇತ್ರಕ್ಕೆ ಹೊಸ ತಿರುವು ನೀಡಿತ್ತು. ಗೇರ್ ಹೊಂದಿದ್ದ ಈ ಸ್ಕೂಟರ್, 50 ರಿಂದ 55 ಮೈಲೇಜ್ ಕೂಡ ಪ್ರಮುಖವಾಗಿ ಗಮನಸೆಳೆದಿತ್ತು. ಸದ್ಯ ಹೀರೋ ಪುಚ್ ಕಾಣಸಿಗುವುದೇ ವಿರಳ.