Asianet Suvarna News Asianet Suvarna News

ಭಾರತದಿಂದ ರಫ್ತಾಗುತ್ತಿರುವ ಆಡಿ e tron ಯೂರೋಪ್‌ನ ಬೆಸ್ಟ್ SUV ಕಾರು!

ಭಾರತದಲ್ಲಿ ಜೋಡಣೆ ಮಾಡಿ ವಿದೇಶಕ್ಕೆ ರಫ್ತಾಗುತ್ತಿರುವ ಆಡಿ ಇ ಟ್ರೋನ್ ಎಲೆಕ್ಟ್ರಿಕ್ ಕಾರು ಯೂರೋಪ್ ರಾಷ್ಟ್ರಗಳಲ್ಲಿನ ಬೆಸ್ಟ್ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ. 

India bound Audi e tron best Suv electric car in Europe
Author
Bengaluru, First Published Jul 18, 2020, 5:15 PM IST

ನವದೆಹಲಿ(ಜು.18): ವಿಶ್ವದಲ್ಲೇ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 2020ರಲ್ಲಿ ಸಂಚಲನ ಮೂಡಿಸಿದ ಆಡಿ ಇ ಟ್ರೋನ್ ಎಲೆಕ್ಟ್ರಿಕ್ ಕಾರು ಯೂರೋಪ್ ರಾಷ್ಟ್ರಗಳಲ್ಲಿನ ಬೆಸ್ಟ್ SUV ಎಲೆಕ್ಟ್ರಿಕ್ ಕಾರಾಗಿ ಹೊರಹೊಮ್ಮಿದೆ. ವಿಶೇಷ ಅಂದರೆ ಆಡಿ ಇ ಟ್ರೋನ್ ಕಾರು ಭಾರತದಲ್ಲಿ ಜೋಡಣೆ ಮಾಡಿ ವಿದೇಶಕ್ಕೆ ರಫ್ತಾಗುತ್ತಿದೆ. 

ಆಡಿ RS7 ಸ್ಪೋರ್ಟ್ಸ್‌ಬ್ಯಾಕ್ ಬಿಡುಗಡೆ ದಿನಾಂಕ ಬಹಿರಂಗ!

2020ರ ಮೊದಲಾರ್ಧದಲ್ಲಿ ವಿಶ್ವದಲ್ಲಿ ಆಡಿ ಇ ಟ್ರೋನ್ 17,641 ಕಾರುಗಳು ಮಾರಾಟ ಮಾಡಲಾಗಿದೆ. ಇ ಟ್ರೋನ್‌ನಿಂದ ಆಡಿ ಕಾರಿನ ಮಾರಾಟ ಶೇಕಡಾ 87 ರಷ್ಟು ಹೆಚ್ಚಳವಾಗಿದೆ. ಯೂರೋಪ್ ರಾಷ್ಟ್ರದಲ್ಲಿ ಆಡಿ ಇ ಟ್ರೋನ್ ಕಾರಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಆಡಿ ಹೇಳಿದೆ.

ಆಡಿ Q8 ಕಾರು ಬಿಡುಗಡೆ; ಮೊದಲ ಕಾರು ಖರೀದಿಸಿದ ವಿರಾಟ್ ಕೊಹ್ಲಿ!.

ಇಟ್ರೋನ್ S, ಇಟ್ರೋನ್ ಸ್ಪೋರ್ಟ್ಸ್‌ಬ್ಯಾಕ್ ಹಾಗೂ ಇಟ್ರೋನ್ ಸ್ಪೋರ್ಟ್ಸ್‌ಬ್ಯಾಕ್ S ವೇರಿಯೆಂಟ್ ಲಭ್ಯವಿದೆ. ಆಡಿ ಇ ಟ್ರೋನ್ ವಿಶೇಷ ಅಂದರೆ ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 436 ಕಿಲೋಮೀಟರ್ ಮೈಲೇಜ್ ನೀಡಲಿದೆ. ಲಿಕ್ವಿಡ್ ಕೂಲ್ಡ್ 95kHh ಲಿಥಿಯಂ ಐಯಾನ್ ಬ್ಯಾಟರಿ  ಹೊಂದಿದೆ. ಇಷ್ಟೇ ಅಲ್ಲ 2 ಎಲೆಕ್ಟ್ರಿಕ್ ಮೋಟಾರ್ ಕೂಡ ಹೊಂದಿದೆ.

ಆಡಿ ಇ ಟ್ರೋನ್ ಕಾರು 0 ಯಿಂದ 100 ಕಿ.ಮೀ ವೇಗ ತಲುಪಲು 6.6 ಸೆಕೆಂಡ್ ತೆಗೆದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ 200 ಕಿ.ಮೀ ಪ್ರತಿ ಗಂಟೆಗೆ.  300 kW ಹಾಗೂ 664 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.  

2021ರಲ್ಲಿ ಆಡಿ ಇ ಟ್ರೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಭಾರತದಲ್ಲಿ ಆಡಿ ಇ ಟ್ರೋನ್ ಅನಾವರಣ ಮಾಡಲಾಗಿದೆ. 

Follow Us:
Download App:
  • android
  • ios