ಆಡಿ Q8 ಕಾರು ಬಿಡುಗಡೆ; ಮೊದಲ ಕಾರು ಖರೀದಿಸಿದ ವಿರಾಟ್ ಕೊಹ್ಲಿ!
ಭಾರತದಲ್ಲಿ ಆಡಿ Q8 ಪ್ರೀಮಿಯಂ ಲಕ್ಸುರಿ ಕಾರು ಬಿಡುಗಡೆಯಾಗಿದೆ. ಟೀಂ ಇಂಡಿಯಾ ನಾಯಕ, ಆಡಿ ಅಂಬಾಸಿಡರ್ ವಿರಾಟ್ ಕೊಹ್ಲಿ ಕಾರು ಬಿಡುಗಡೆ ಮಾಡಿದ ಜೊತೆ ಮೊದಲ ಕಾರನ್ನು ಖರೀದಿಸಿದರು. ನೂತನ ಕಾರಿನ ಬೆಲೆ, ವಿಶೇಷತೆ ವಿವರ ಇಲ್ಲಿದೆ.
ಮುಂಬೈ(ಜ.16): ಭಾರತದಲ್ಲಿ ಆಡಿ Q8 ಕಾರು ಬಿಡುಗಡೆಯಾಗಿದೆ. ಆಧುನಿಕ ತಂತ್ರಜ್ಞಾನ, BS6 ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಆಡಿ Q8 ಕಾರನ್ನು ಆಡಿ ರಾಯಭಾರಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದರೆ. ಇದೇ ವೇಳೆ ಆಡಿ Q8 ಮೊದಲ ಕಾರಿನ ಕೀಯನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಆಡಿ ಕಾರು ನಿಮ್ಮದಾಗಿಸಿಕೊಳ್ಳಲು ಇದೆ ಅವಕಾಶ!
ಆಡಿ Q8 ಕಾರು ಪ್ರಿಮಿಯಂ ಲಕ್ಸುರಿ SUV ಕಾರು. ಇತ್ತೀಗೆ ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಆಡಿ Q8 ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಮೂಲಕ ಅತ್ಯಂತ ಸುರಕ್ಷಿತ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. LED ಹೆಡ್‌ಲ್ಯಾಂಪ್ಸ್, ಸಿಗ್ನೇಚರ್ ಫ್ರಂಟ್ ಗ್ರಿಲ್ ಸೇರಿದಂತೆ ಹಲವು ಬದಲಾವಣೆಗಳಿಂದ ನೂತನ ಕಾರು ಹೆಚ್ಚು ಸ್ಪೊರ್ಟೀವ್ ಲುಕ್ ಪಡೆದುಕೊಂಡಿದೆ.
ಇದನ್ನೂ ಓದಿ: ಅತ್ಯಾಧುನಿಕ ತಂತ್ರಜ್ಞಾನದ ಆಡಿ A6 ಕಾರು ಬಿಡುಗಡೆ!
ಪನೋರಮಿಕ್ ಸನ್‌ರೂಫ್, ಆ್ಯಂಬಿಯೆಂಟ್ ಲೈಟಿಂಗ್, ವಯರ್‌ಲೆಸ್ ಚಾರ್ಜಿಂಗ್, ಪಿಯಾನೋ ಬ್ಲಾಕ್ ಡ್ಯಾಶ್ ಬೋರ್ಡ್, 8.6 ಡಿಜಿಟಲ್ ಡಿಸ್‌ಪ್ಲೇ, ಕ್ಲಮೇಟ್ ಕಂಟ್ರೋಲ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ನೂತನ ಫೀಚರ್ಸ್ ಈ ಕಾರಿನಲ್ಲಿದೆ. ಇನ್ನು 360 ಡಿಗ್ರಿ ಕ್ಯಾಮರ. ಲೇನ್ ಚೇಂಜ್ ಅಲರ್ಟ್ ಸೇರಿದಂತೆ ಎಲ್ಲಾ ಸೇಫ್ಟಿ ಫೀಚರ್ಸ್ ಈ ಕಾರಿನಲ್ಲಿದೆ.
ಇದನ್ನೂ ಓದಿ: ರಾತ್ರಿ ಕಾರು ಡ್ರೈವ್ ಅಂದ್ರೆ ವಿರಾಟ್ ಕೊಹ್ಲಿಗೆ ಇಷ್ಟ!.
ನೂತನ ಕಾರು ಪೆಟ್ರೋಲ್ ವರ್ಶನ್ ಮಾತ್ರ ಲಭ್ಯವಿದೆ. 3.0 ಲೀಟರ್ TFSI ಎಂಜಿನ್ ಹೊಂದಿದ್ದು, 340 bhp ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸಲಬಲ್ಲ ಸಾಮರ್ಥ್ಯ ಹೊಂದಿದೆ. ಆಡಿ Q8 ಕಾರಿನ ಗರಿಷ್ಠ ವೇಗ 250 ಕಿ.ಮೀ ಪ್ರತಿ ಗಂಟೆಗೆ. ಇನ್ನು 0 ಯಿಂದ 100 ಕಿ.ಮೀ ವೇಗ ತಲುಪಲು ಈ ಕಾರು 5.9 ಸೆಕೆಂಡು ತೆಗುಕೊಳ್ಳಲಿದೆ. 2019ರ ನವೆಂಬರ್ ತಿಂಗಳಿನಿಂದ ಬುಕಿಂಗ್ ಆರಂಭಿಸಲಾಗಿತ್ತು. ಇದೀಗ ಕಾರು ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾರು ಗ್ರಾಹಕರ ಕೈಸೇರಲಿದೆ. ನೂತನ ಕಾರಿ ಬೆಲೆ 1.33 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).