ನವದೆಹಲಿ(ಜ.02): ಹೊಸ ವರ್ಷದಲ್ಲಿ ಬಹುತೇಕ ಕಂಪನಿಗಳು ಕಾರುಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಆದರೆ ಹ್ಯುಂಡೈ ವರ್ಷದ ಆರಂಭದಲ್ಲೇ ಬರೋಬ್ಬರಿ 95,000 ರೂಪಾಯಿ ಆಫರ್ ನೀಡಿದೆ. ಎಪ್ರಿಲ್ 1 ರಿಂದ BS6 ಎಂಜಿನ್ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ. ಹೀಗಾಗಿ ಸ್ಟಾಕ್ ಕ್ಲೀಯರ್‌ಗಾಗಿ ಹ್ಯುಂಡೈ ಕ್ರೆಟಾ ಕಾರಿನ ಮೇಲೆ ರಿಯಾಯಿತಿ ನೀಡಿದೆ.

ಇದನ್ನೂ ಓದಿ:HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!

ಹ್ಯುಂಡೈ ಕ್ರೆಟಾ ಕಾರಿಗೆ ಕಿಯಾ ಸೆಲ್ಟೋಸ್ ತೀವ್ರ ಪೈಪೋಟಿ ನೀಡುತ್ತಿದೆ. ಕ್ರೆಟಾ ಕಾರಿಗಿಂತ ದೊಡ್ಡದಾದ ಸೆಲ್ಟೋಸ್ ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. ಇಷ್ಟೇ ಅಲ್ಲ ಕ್ರೆಟಾ ಕಾರಿಗಿಂತ ಬೆಲೆಯೂ ಕಡಿಮೆಯಾಗಿದೆ. ಕ್ರೆಟಾ ಕಾರಿನ ಬೆಲೆ 10 ಲಕ್ಷ ರೂಪಾಯಿಂದ ಆರಂಭ. ಹೀಗಾಗಿ ಕ್ರೆಟಾ ಕಾರುಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ. ಇದೀಗ ಸ್ಟಾಕ್ ಕ್ಲೀಯರ್ ಮಾಡಲು ಉದ್ದೇಶಿಸಿರುವ ಹ್ಯುಂಡೈ 95 ಸಾವಿರ ರೂಪಾಯಿ ಆಫರ್ ನೀಡೋ ಮೂಲಕ ಸೆಲ್ಟೋಸ್ ಕಾರಿಗಿಂತ ಬೆಲೆ ಕಡಿಮೆಯಾಗಿದೆ. 

ಇದನ್ನೂ ಓದಿ: ಕಡಿಮೆ ಬೆಲೆಯ ದಾಟ್ಸನ್ SUV ಕಾರು ಬಿಡುಗಡೆಗೆ ರೆಡಿ!

ಕ್ರೆಟಾ  ಕಾರು 3 ಎಂಜಿನ್ ವೇರಿಯೆಂಟ್ ಗಳಲ್ಲಿ ಲಭ್ಯವಿದೆ. 1.4 ಲೀಟರ್ ಎಂಜಿನ್, 4 ಸಿಲಿಂಡರ್ ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್ 89 Bhp ಪವರ್ ಹಾಗೂ 220 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಎರಡನೇ ವೇರಿಯೆಂಟ್ 1.6 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್, 121 Bhp ಪವರ್ ಹಾಗೂ 153 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಂತಿಮ ಎಂಜಿನ್ ವೇರಿಯೆಂಟ್ 1.6 ಟರ್ಬೋ ಚಾರ್ಜಡ್ ಡೀಸೆಲ್ ಎಂಜಿನ್, 4 ಸಿಲಿಂಡರ್ ಹಾಗೂ 126 Bhp ಪವರ್ ಮತ್ತು 260 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ:ಹೊಸ ವರ್ಷಕ್ಕೆ ಹ್ಯುಂಡೈ ಔರಾ ಕಾರು; ಬೆಲೆ, ಇಲ್ಲಿದೆ ವಿಶೇಷತೆ!

ಸೂಚನೆ: ಆಫರ್ ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಯಾಗುವ ಸಾಧ್ಯತೆ ಇದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.