ನವದೆಹಲಿ(ಸೆ.18): ಕಳೆದ ಕೆಲ ತಿಂಗಳುಗಳಿಂದ ಹೊಂಡಾ ಮೋಟಾರ್‌ಸೈಕಲ್ ಕ್ರೂಸರ್ ಬೈಕ್ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.  ಹಾರ್ನೆಟ್ 2.0 ಬೈಕ್ ಬಿಡುಗಡೆ ಬಳಿಕ ಇದೀಗ ಹೊಂಡಾ ಹೊಚ್ಚ ಹೊಸ ಕ್ರೂಸರ್ ಬೈಕ್ ಬಿಡುಗಡೆ ತಯಾರಿ ಮಾಡಿದೆ. ಇದೇ ಸೆಪ್ಟೆಂಬರ್ 30 ರಂದು ರಾಯಲ್ ಎನ್‌ಫೀಲ್ಡ್ ಹಾಗೂ ಜಾವಾ ಮೋಟಾರ್‌ಸೈಕಲ್ ಪ್ರತಿಸ್ಪರ್ಧಿಯಾಗಿ ಕ್ರೂಸರ್ ಬೈಕ್ ಬಿಡುಗಡೆ ಮಾಡುತ್ತಿದೆ.

ಹೊಂಡಾ ಹಾರ್ನೆಟ್ 2.0 ಬೈಕ್ ಬಿಡುಗಡೆ: ಕಡಿಮೆ ಬೆಲೆಯಲ್ಲಿ 184cc ಬೈಕ್!

ನೂತನ ಹೊಂಡಾ ಕ್ರೂಸರ್ ಬೈಕ್ 400 cc ಸೆಗ್ಮೆಂಟ್ ಬೈಕ್ ಇದಾಗಿದ್ದು, ರೆಟ್ರೋ ಕ್ಲಾಸಿಕ್ ಲುಕ್‌ನಲ್ಲಿ ಬೈಕ್ ಬಿಡುಗಡೆಯಾಗಲಿದೆ. ಭಾರತೀಯ ಗ್ರಾಹಕರ ಗಮನದಲ್ಲಿಟ್ಟುಕೊಂಡು ಬೈಕ್ ಡಿಸೈನ್ ಮಾಡಲಾಗಿದೆ. ಹೊಂಡಾ ರೆಬಲ್ 300 ಬೈಕ್ ಮಾದರಿಯನ್ನು ಹೋಲುತ್ತಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ ಈ ಕುರಿತ ಹೊಂಡಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ!

ಹೊಂಡಾ ಕ್ರೂಸರ್ ಬೈಕ್ ಬೆಲೆ 2 ರಿಂದ 2.5 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.  ಭಾರತದಲ್ಲಿ 400 ಸಿಸಿ ಸೆಗ್ಮೆಂಟ್ ಬೈಕ್‌ ಪೈಕಿ ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ ಇಲ್ಲ. ಇದೀಗ ಹೊಂಡಾ ಸಜ್ಜಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ನೂತನ ಬೈಕ್ ಹೊಂಡಾ ಅಧೀಕೃತ ಡೀಲರ್ ಬಿಗ್ ವಿಂಗ್ ಡೀಲರ್ ಮೂಲಕ ಲಭ್ಯವಾಗಲಿದೆ. 

ಭಾರತದಲ್ಲಿ 75 ಬಿಗ್ ವಿಂಗ್ ಡೀಲರ್ ಶೋ ರೂಂಗಳಿದ್ದು, ಗ್ರಾಹಕರಿಗೆ ಸುಲಭವಾಗಿ ಬೈಕ್ ಲಭ್ಯವಾಗುವಂತೆ ಮಾಡಲು ಹೊಂಡಾ ನಿರ್ಧರಿಸಿದೆ. ಇದೀಗ ಎಲ್ಲರ ಚಿತ್ತ ಹೊಂಡಾ ಕ್ರೂಸರ್ ಬೈಕ್‌ನತ್ತ ನೆಟ್ಟಿದೆ.