ನವದೆಹಲಿ(ಜು.04): ಹೊಸತನ, ಹೆಚ್ಚುವರೀ ಫೀಚರ್ಸ್ ಮೂಲಕ 5ನೇ ಜನರೇಶನ್ ಹೊಂಡಾ ಸಿಟಿ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಶಾರ್ಪ್ 9 LED ಹೆಡ್‌ಲೈಟ್ಸ್, ಸುರಕ್ಷತೆಗಾಗಿ ಬಲಿಷ್ಠ ಬಾಡಿ, 16 ಇಂಚಿನ ಅಲೋಯ್ ವೀಲ್, ಸ್ಟೈಲೀಶ್ ಟೈಲ್ ಲ್ಯಾಂಪ್ ಸೇರಿದಂತೆ ಹಲವು ವಿಶೇಷಗಳನ್ನು ನೂತನ ಹೊಂಡಾ ಸಿಟಿ ಕಾರು ಒಳಗೊಂಡಿದೆ.

ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!.

ನೂತನ ಹೊಂಡಾ ಸಿಟಿ ಕಾರು ಜುಲೈ 15ರಂದು ಬಿಡುಗಡೆಯಾಗಲಿದೆ ಎಂದು ಹೊಂಡಾ ಹೇಳಿದೆ. ಮಾರ್ತ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಹೊಂಡಾ ಸಿಟಿ ಕಾರು ಕೊರೋನಾ ವೈರಸ್ ಕಾರಣ ವಿಳಂಬವಾಗಿದೆ.  ಆಕರ್ಷಕ ವಿನ್ಯಾಸ, ಶೈಲಿಯಿಂದ ಕಾರು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!

ಕಾರಿನ ಒಳಭಾಗದಲ್ಲಿ 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಮರದ ಡ್ಯಾಶ್ ಟ್ರಿಮ್ ನೀಡಲಾಗಿದೆ. ಇನ್ನು ಫೋನ್ ಮೂಲಕ ಎಸಿ, ಇಗ್ನಿನೀಶನ್, ಬೂಟ್ ಒಪನ್ ಮಾಡಬಹುದು. 

ಎರುಡ ವೇರಿಯೆಂಟ್ ಎಂಜಿನ್‌ನಲ್ಲಿ ನೂತನ ಹೊಂಡಾ ಸಿಟಿ ಕಾರು ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. ಎರಡೂ ಎಂಜಿನ್ BS6 ಎಮಿಶನ್ ಎಂಜಿನ್ ಆಗಿದೆ. ಅತ್ಯಾಧುನಿಕ cvt ಗೇರ್ ಬಾಕ್ಸ್ ಲಭ್ಯವಿದೆ.

ಜುಲೈ 15ರಂದು ಬಿಡುಗಡೆಯಾಗಲಿರುವ ನೂತನ ಹೊಂಡಾ ಸಿಟಿ ಕಾರಿನ ಬೆಲೆ 11.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಯಿಂದ ಅಂದಾಜಿಸಲಾಗಿದೆ.