ನವದೆಹಲಿ(ಜ.20): ಹೀರೋ ಎಲೆಕ್ಟ್ರಿಕ್ ಇದೀಗ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಪ್ಲಾಶ್ ಇ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ 7,088 ರೂಪಾಯಿ ಆಫರ್ ನೀಡಿದೆ. ಆಫರ್ ಬಳಿಕ ಫ್ಲಾಶ್ ಇ ಸ್ಕೂಟರ್ ಬೆಲೆ 29,990 ರೂಪಾಯಿ. ಇಷ್ಟೇ ಅಲ್ಲ ಪೇಟಿಎಂ ಮೂಲಕ ಹಣ ಪಾವತಿಸುವವರಿಗೆ 10,500 ರೂಪಾಯಿ ಬೆನಿಫಿಟ್ ನೀಡಿದೆ.

ಇದನ್ನೂ ಓದಿ: ಹೊಂಡಾ ಆ್ಯಕ್ಟೀವಾ 6G ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!

ಹೀರೋ ಎಲೆಕ್ಟ್ರಿಕ್ ಫ್ಲಾಶ್ ಸ್ಕೂಟರ್ led ಹೆಡ್‌ಲ್ಯಾಂಪ್ಸ್, ಮೊಬೈಲ್ ಚಾರ್ಜಿಂಗ್, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಸ್ಕೂಟರ್ ಕರ್ಬ್ ತೂಕ 69 ಕೆಜಿ. ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಎಲ್ಲಾ ನಗರ ಹಾಗೂ ಪಟ್ಟಣಗಳಲ್ಲಿ ಲಭ್ಯವಿದೆ. 

ಇದನ್ನೂ ಓದಿ:ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

ಕಡಿಮೆ ಬೆಲೆ ಹಾಗೂ ಕಡಿಮೆ ತೂಕದ ಹೀರೋ ಎಲೆಕ್ಟ್ರಿಕ್ ಫ್ಲಾಶ್ ಸ್ಕೂಟರ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಹೇಳಿ ಮಾಡಿಸಿದ ಸ್ಕೂಟರ್. ಆದರೆ ಭಾರತದಲ್ಲಿ ಎಲೆಕ್ಚ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಶನ್ ಅಭಿವೃದ್ದಿಯಾಗಿಲ್ಲ.