ಬೆಂಗಳೂರು(ಫೆ.03): 7ನೇ ಆವೃತ್ತಿ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ತೀವ್ರ ಕುತೂಹಲ ಕೆರಳಿಸಿತ್ತು. ಘಟಾನುಟಿ ಸ್ಪರ್ಧಿಗಳೇ ಈ ಬಾರಿಯ ಶೋನ ವಿಶೇಷವಾಗಿತ್ತು. ಬರೋಬ್ಬರಿ 113 ದಿನ ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಡಿದ ಕರಾವಳಿಯ ಶೈನ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಶೈನ್ ಶೆಟ್ಟಿ ಒಟ್ಟು 61 ಲಕ್ಷ ರೂಪಾಯಿ ಹಾಗೂ ಅಲ್ಟ್ರೋಜ್ ಕಾರನ್ನು ಬಹುಮಾನವಾಗಿ ಪಡೆದಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!.

ಶೈನ್ ಶೆಟ್ಟಿ ಬಹುಮಾನವಾಗಿ ಪಡೆದ ಟಾಟಾ ಅಲ್ಟ್ರೋಜ್ ಕಾರು ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಜ.22 ರಂದು ಅಲ್ಟ್ರೋಜ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆಯ ಬುಕಿಂಗ್ ಕಂಡಿದೆ. ಇದಕ್ಕೆ ಕಾರಣ ಅಲ್ಟ್ರೋಜ್ ದೇಶದ ಅತ್ಯಂತ ಸುರಕ್ಷತೆಯ ಕಾರಾಗಿದೆ.

ಇದನ್ನೂ ಓದಿ: ಶೈನ್‌ ಶೆಟ್ಟಿ ಕೈ ಸೇರಿದ್ದು 50 ಲಕ್ಷವಲ್ಲ,61 ಲಕ್ಷ ಮತ್ತು ದುಬಾರಿ ಕಾರು!

ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20 ಕಾರಿಗೆ ಪ್ಪತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾಗಿದೆ. ಈ ಕಾರಿನ ಬೆಲೆ 5.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭವಾಗಲಿದ್ದು, ಗರಿಷ್ಠ ಬೆಲೆ 7.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಶೈನ್ ಶೆಟ್ಟಿ ಪಡೆದಿರುವ ಕಾರು ಟಾಪ್ ವೇರಿಯೆಂಟ್ ಆಗಿದ್ದರೆ, ಆನ್ ರೋಡ್ ಬೆಲೆ ಸರಿಸುಮಾರು 9 ಲಕ್ಷ ರೂಪಾಯಿ.

ಟಾಟಾ ನೆಕ್ಸಾನ್ ಬಳಿಕ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಕಾರು ಅನ್ನೋ ಹೆಗ್ಗಳಿಕೆಗೆ ಅಲ್ಟ್ರೋಜ್ ಪಾತ್ರವಾಗಿದೆ. ಕಡಿಮೆ ಬೆಲೆ ಲಭ್ಯವಿರುವ ಹಾಗೂ ಗರಿಷ್ಠ ಸುರಕ್ಷತೆ ನೀಡಬಲ್ಲ ಕಾರು ಅಲ್ಟ್ರೋಜ್. ಮಕ್ಕಳ ಹಾಗೂ ವಯಸ್ಕರ  ಸುರಕ್ಷತೆಯಲ್ಲಿ ಗರಿಷ್ಠ 5 ಸ್ಟಾರ್ ಪಡೆದಿದೆ. 

ಅಲ್ಟ್ರೋಝ್ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು  86 PS ಪರವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  1.5 ಲೀಟರ್ ಡೀಸೆಲ್ ಎಂಜಿನ್ 90 PS ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.