ಗೋವಾ(ಮಾ.01): ಸುಂದರ ಸಮುದ್ರ ತೀರಗಳಿಂದ ಗೋವಾ ವಿಶ್ವದಲ್ಲೇ ಪ್ರಸಿದ್ಧಿಯಾಗಿದೆ. ದೇಶ-ವಿದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಇಲ್ಲಿ ಕಳ್ಳತನ ಸೇರಿದಂತೆ ಇತರ ಅಪರಾಧ ಪ್ರಕರಣಗಳನ್ನ ಸಂಪೂರ್ಣ ನಿಯಂತ್ರಿಸಲು ಇದೀಗ ಗೋವಾ ಪೊಲೀಸರು ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ದುಬೈ ಅಲ್ಲ ಇದು ಭಾರತ - UP ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!

ಬೀಚ್ ತೀರದಲ್ಲಿ ಗಸ್ತು ತಿರುಗಲು  ಸಾಮಾನ್ಯ ವಾಹನದಲ್ಲಿ ಅಸಾಧ್ಯ. ಹೀಗಾಗಿ ಗೋವಾ ಪೊಲೀಸರು ಪವರ್‌ಲ್ಯಾಂಡ್  4X4 ATV ಬೈಕ್ ಖರೀದಿಸಿದ್ದಾರೆ. ಈ ಮೂಲಕ ಬೀಚ್ ತೀರದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಎಚ್ಚರ ವಹಿಸಲು ಗೋವಾ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ - ನೂತನ ಮಹೀಂದ್ರ ಸ್ಕಾರ್ಪಿಯೋ ಸೇರ್ಪಡೆ!

ಪವರ್‌ಲ್ಯಾಂಡ್  4X4 ATV ಬೈಕ್ ಬೆಲೆ 4.5 ಲಕ್ಷ ರೂಪಾಯಿ. 700 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ 45 bhp ಪವರ್ ಹೊಂದಿದೆ. ಇತ್ತೀಚೆಗಷ್ಟೇ ಕುಂಭಮೇಳದಲ್ಲಿ ಉತ್ತರ ಪ್ರದೇಶದ ಪೊಲೀಸರು ಇದೇ ಪವರ್‌ಲ್ಯಾಂಡ್  4X4 ATV ಬೈಕ್ ಬಳಸಿದ್ದರು. ಈ ವಾಹನವನ್ನು ರಸ್ತೆಯಲ್ಲಿ ಬಳಸುವಂತಿಲ್ಲ. ಒಂದು ವೇಳೆ ರಸ್ತೆಯಲ್ಲಿ ಈ ವಾಹನ ಉಪಯೋಗಿಸಿದರೆ ನಿಯಮ ಉಲ್ಲಂಘನೆಯಾಗಲಿದೆ.