ನವದೆಹಲಿ(ಸೆ.04):  ಕೇಂದ್ರ ಸರ್ಕಾರ ಭಾರತವನ್ನು ಹಂತ ಹಂತವಾಗಿ ಡಿಜಿಟಲೀಕರಣ ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಇದೀಗ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ಇದರಲ್ಲಿ ರಸ್ತೆ ಮತ್ತು ಸಾರಿಗೆ ಇಲಾಖೆ ಕೂಡ ಪ್ರಮುಖಾಗಿದೆ. ಟೋಲ್ ಗೇಟ್‌ಗಳಲ್ಲಿ ನಗದು ನೀಡಿ ತೆರಳು ಪದ್ದತಿಗೆ ಬ್ರೇಕ್ ಹಾಕಲು ಫಾಸ್ಟ್ ಟ್ಯಾಗ್ ನಿಯಮ ಜಾರಿಗೆ ತಂದಿದೆ. ಇದೀಗ ಹಳೇ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಮುಂದಾಗಿದೆ.

ಫಾಸ್ಟ್ಯಾಗ್ ನಡೆಯಲ್ಲ ಹಣ ಕಟ್ಟು; ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಲ್ಲೆ!.

ನೂತನ ನಿಯಮದ ಪ್ರಕರಾ ಜನವರಿ 1, 2021ರಿಂದ ಡಿಸೆಂಬರ್ 2017ಕ್ಕಿಂತ ಹಿಂದೆ ಮಾರಾಟವಾದ ಎಲ್ಲಾ ಹಳೆ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಮುಂದಾಗಿದೆ. ಈ ಕುರಿತು ಕರಡು ಸೂಚನೆ ಹೊರಡಿಸಿದ್ದು, ಸಾಧಕ ಬಾಧಕಗಳ ಪ್ರತಿಕ್ರಿಯೆ ಕೇಳಿದೆ. ಇಷ್ಟೇ ಅಲ್ಲ ಫಾಸ್ಟ್ ಟ್ಯಾಗ್ ಇದ್ದರೆ ಮಾತ್ರ ಥರ್ಡ್ ಪಾರ್ಟಿ ವಿಮೆ ಪ್ರಮಾಣ ಪತ್ರ ಸಿಗಲಿದೆ. 

ಇತ್ತೀಚೆಗೆ ಕೇಂದ್ರ ಸರ್ಕಾರ 2017ರ ಬಳಿಕ ಮಾರಾಟವಾಗುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ವಾಹನ ಡೀಲರ್‌ಗಳು ಫಾಸ್ಟ್ ಟ್ಯಾಗ್ ನೀಡಿದ ಬಳಿಕವೇ ವಾಹನದ ರಿಜಿಸ್ಟ್ರೇಶನ್ ನಡೆಯುತ್ತಿತ್ತು. ಇದೀಗ 2017ರ ಹಿಂದಿನ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲು ಕೇಂದ್ರ ಮುಂದಾಗಿದೆ.